Bengaluru, ಮೇ 5 -- ಬಂಡೀಪುರ: ಸಫಾರಿ ಹೋಗಿದ್ದ ಪ್ರವಾಸಿಗರ ಎದುರೇ ಜಿಂಕೆಯನ್ನು ಬೇಟೆಯಾಡಿದ ಹುಲಿಯ ವಿಡಿಯೊ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಬಂಡೀಪುರದಲ್ಲಿ ವ್ಯಾಘ್ರನ ಭರ್ಜರಿ ಬೇಟೆಯನ್ನು ಕಂಡು ಸಫಾರಿಗರು ಒಂದು ಕ್ಷಣ ಆತಂಕಕ್ಕೊಳಗಾಗಿದ್ದಾರೆ. ಬಂಡೀಪುರದ ವಾಹನಗಳಲ್ಲಿ ಸಫಾರಿ ನಡೆಸುತ್ತಿರುವಾಗ, ಪ್ರವಾಸಿಗರ ಕಣ್ಣೆದುರಿನಲ್ಲೇ ಹುಲಿಯ ಬಾಯಿಗೆ ಜಿಂಕೆ ಸಿಲುಕಿದೆ. ಈ ಕ್ಷಣವನ್ನು ಪ್ರವಾಸಿಗರು ತಮ್ಮ ಮೊಬೈಲ್ ಮತ್ತು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜಿಂಕೆಯನ್ನು ಕ್ಷಣಮಾತ್ರದಲ್ಲೇ ಹುಲಿ ಬೇಟೆಯಾಡಿದ್ದನ್ನು ಕಣ್ಣಾರೆ ಕಂಡು ಒಂದು ಕ್ಷಣ ಗಾಬರಿಗೊಂಡ ಸಫಾರಿಗರು, ಏನು ಮಾಡಬೇಕೆಂದು ತೋಚದೆ ಆತಂಕಕ್ಕೊಳಗಾದರು. ಭಾರಿ ಗಾತ್ರದ ಕೊಂಬಿನ ಜಿಂಕೆಯನ್ನು ಬೇಟೆಯಾಡಿ ಕಚ್ಚಿಕೊಂಡು ಧರಧರನೆ ಎಳೆದೊಯ್ದ ಹುಲಿಯನ್ನು ಕಂಡು ಪ್ರವಾಸಿಗರು ಭಯಗೊಂಡರು. ಭಾನುವಾರ ಮೇ 4ರಂದು ಸಂಜೆ ಪ್ರವಾಸಿಗರು ಸಫಾರಿಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.

ಭಾರಿ ಗಾತ್ರದ ಜಿಂಕೆಯನ್ನು ಹುಲಿ ಕಚ್ಚಿ ಎಳೆದೊಯ್ಯುತ್ತಿರುವ ದೃಶ್ಯ ಮತ್ತು ಅದರ ಅತ್...