ಭಾರತ, ಮೇ 16 -- ಮಂಗಳೂರು: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಪೇಟೆಯ ಅಕ್ಕರಂಗಡಿ ಎಂಬಲ್ಲಿ ವ್ಯಕ್ತಿಯೊಬ್ಬರಿಗೆ ಮಾರಕಾಯುಧದಲ್ಲಿ ಇರಿದ ಘಟನೆ ನಡೆದಿದೆ. ಇಲ್ಲಿನ ಅಕ್ಕರಂಗಡಿ ನಿವಾಸಿ ಹಮೀದ್ (38) ಎಂಬವರಿಗೆ ದುಷ್ಕರ್ಮಿಗಳು ಇರಿದಿದ್ದಾಗಿ ದೂರಲಾಗಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ಶುಕ್ರವಾರ ರಾತ್ರಿ ಸುಮಾರು 8 ಗಂಟೆಗೆ ಈ ಘಟನೆ ನಡೆದಿದೆ. ಅಕ್ಕರಂಗಡಿಯಲ್ಲಿದ್ದ ಪೈಂಟಿಂಗ್ ಕೆಲಸ ಮಾಡುತ್ತಿರುವ ಹಮೀದ್ ಯಾನೆ ಅಮ್ಮಿ ಅವರಿಗೆ ಬೈಕ್ ನಲ್ಲಿ ಆಗಮಿಸಿದ ಆಗಂತುಕರು ಇರಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಗಾಯಗೊಂಡ ಹಮೀದ್ ಅವರನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಹಮೀದ್ ಅಲ್ಲಿರುವುದನ್ನು ಗಮನಿಸಿ ಜನಸಂಚಾರ ವಿರಳವಾದ ಬಳಿಕ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ತಲವಾರು ಅಥವಾ ಚೂರಿಯಂಥ ಹರಿತವಾದ ಆಯುಧದಲ್ಲಿ ದಾಳಿ ಮಾಡಿದ್ದಾರೆ.
ಪೈಂಟರ್ ವೃತ್ತಿಯಲ್ಲಿ ನಿರತರಾಗಿರುವ ಹಮೀದ್ ಅವರಿಗೆ ಇರಿದು ತೆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.