ಭಾರತ, ಮೇ 16 -- ಮಂಗಳೂರು: ಲಾರಿಗಳೆರಡು ಅಪಘಾತ ಸಂಭವಿಸಿದ ಪರಿಣಾಮ ಲಾರಿಯಲ್ಲಿದ್ದ ಜಲ್ಲಿ ಮಿಶ್ರಿತ ಬಿಸಿ ಡಾಂಬರು ಮೈಮೇಲೆ ಹರಿದು ಲಾರಿ ಚಾಲಕನೋರ್ವ ಮೃತಪಟ್ಟ ಹೃದಯವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪದ ಕಂಚಿನಡ್ಕಪದವು ಎಂಬಲ್ಲಿ ನಡೆದಿದೆ. ಸಜೀಪನಡು ಗೋಳಿಪಡ್ಪು ನಿವಾಸಿ ರಫೀಕ್ ( 45) ಮೃತಪಟ್ಟ ವ್ಯಕ್ತಿ. ಉಳಿದಂತೆ ಲಾರಿಯಲ್ಲಿದ್ದ ಕ್ಲೀನರ್ ಯೂಸುಫ್ ಅವರ ಕೈ ಕಾಲುಗಳ ಮೇಲೆ ಡಾಂಬರು ಬಿದ್ದಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೊಂದು ಲಾರಿಯ ಚಾಲಕ ರಿಜ್ವಾನ್ ಹಾಗೂ ಅಲ್ಪಾಸ್ ಅವರಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಂಚಿನಡ್ಕಪದವು ಕಡೆಯಿಂದ ಸಜೀಪನಡು ಕಡೆಗೆ ಹೋಗುತ್ತಿದ್ದ ವೇಳೆ ಕಂಚಿನಡ್ಕಪದವು ಎಂಬಲ್ಲಿ ಅಪಘಾತ ಸಂಭವಿಸಿದೆ.

ಕೆಂಪು ಕಲ್ಲುಗಳನ್ನು ಸಾಗಿಸುವ ಲಾರಿಗೆ ಹಿಂಬದಿಯಿಂದ ಬರುತ್ತಿದ್ದ ಡಾಮರು ಟಿಪ್ಪರ್ ಲಾರಿ ಚಾಲಕನ ಅಜಾಗರೂಕತೆಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡು ಟಿಪ್ಪರ್ ಲಾರಿಗಳು ಆಳೆತ್ತರದಲ್ಲಿದ್ದ ಅಡಿಕೆ ತೋಟಕ್...