ಭಾರತ, ಫೆಬ್ರವರಿ 25 -- ಕೋಲ್ಕತಾ: ಬಂಗಾಳಕೊಲ್ಲಿಯಲ್ಲಿ ಮಂಗಳವಾರ (ಫೆ.25) ಬೆಳಿಗ್ಗೆ 5.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಇದರಿಂದ ಕೋಲ್ಕತ್ತಾ ನಗರ ಮಾತ್ರವಲ್ಲದೆ ಪಶ್ಚಿಮ ಬಂಗಾಳ ರಾಜ್ಯದ ಹಲವಾರು ಭಾಗಗಳಲ್ಲಿ ಜನರಿಗೆ ಭೂಮಿ ನಡುಗಿದೆ ಅನುಭವ ಉಂಟಾಗಿದೆ. ಬೆಳಿಗ್ಗೆ 6:10ರ ವೇಳೆಗೆ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ವರದಿ ಮಾಡಿದೆ.

ಒಡಿಶಾದ ಪುರಿ ಬಳಿ ಭೂಕಂಪನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಬಂಗಾಳಕೊಲ್ಲಿಯಲ್ಲಿ 91 ಕಿ.ಮೀ ಆಳದಲ್ಲಿ ಭೂಕಂಪನವಾಗಿದೆ. ಅಕ್ಷಾಂಶ 19.52 ಉತ್ತರ ಮತ್ತು ರೇಖಾಂಶ 88.55 ಪೂರ್ವದಲ್ಲಿ ಕಂಪನ ದಾಖಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಭೂಕಂಪನದಿಂದಾಗಿ ಕೋಲ್ಕತ್ತಾದ ನಿವಾಸಿಗಳಲ್ಲಿ ಭಾರಿ ಭೀತಿ ಸೃಷ್ಟಿಯಾಗಿದೆ. ಆದರೆ ಯಾವುದೇ ಹಾನಿ ಅಥವಾ ಸಾವುನೋವುಗಳ ಬಗ್ಗೆ ವರದಿ ಹೊರಬಂದಿಲ್ಲ. ಜನರು ತಮಗಾದ ಭೂಕಂಪನದ ಅನುಭವವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಮುಂಜಾನ...