ಭಾರತ, ಮಾರ್ಚ್ 4 -- ಪ್ರತಿ ವರ್ಷ ಪ್ರಪಂಚದಾದ್ಯಂತ ಇರುವ ಲಕ್ಷಾಂತರ ಜನರು ಫ್ಲೂನಿಂದ ತೊಂದರೆಗೊಳಗಾಗುತ್ತಾರೆ, 100 ಕೋಟಿಗಿಂತಲೂ ಹೆಚ್ಚು ಫ್ಲೂ ಪ್ರಕರಣಗಳಲ್ಲಿ 3 ರಿಂದ 5 ಮಿಲಿಯನ್ ಮಂದಿ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಾರೆ. ಸಾಮಾನ್ಯವಾಗಿ ಫ್ಲೂ ಅನ್ನು ಶೀತ ಎಂದು ಭಾವಿಸಲಾಗುತ್ತದೆ. ಆದರೆ ಫ್ಲೂ ನಿಮ್ಮ ದೈನಂದಿನ ಜೀವನ ಮತ್ತು ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸುತ್ತದೆ. ಹಾಗಾಗಿ ಅದಕ್ಕೆ ಸೂಕ್ತ ಲಸಿಕೆ ಪಡೆಯುವುದು ಅವಶ್ಯ ಮತ್ತು ಲಸಿಕೆಯಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದಾಗಿದೆ. ಆದರೆ ಅನೇಕ ಜನರು ಅರಿವಿನ ಕೊರತೆಯಿಂದ ಮತ್ತು ತಪ್ಪು ತಿಳುವಳಿಕೆಗಳಿಂದ ಲಸಿಕೆಯನ್ನು ತೆಗೆದುಕೊಳ್ಳುವುದಿಲ್ಲ.

ಸಾಮಾನ್ಯವಾಗಿ ವೃತ್ತಿಪರರು ಫ್ಲೂಗೆ ಒಳಗಾಗುವ ಸಂಭವ ಹೆಚ್ಚು. ನೀವು ನಗರದ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವವರಾಗಲಿ ಅಥವಾ ಸಣ್ಣ ಪಟ್ಟಣದ ಕಾರ್ಖಾನೆ ಉದ್ಯೋಗಿಯಾಗಿ ಕೆಲಸ ಮಾಡುವವರಾಗಲಿ ನಿಮ್ಮನ್ನು ಫ್ಲೂ ಬಾಧಿಸುತ್ತದೆ. ಇದರಿಂದ ನಿಮ್ಮ ಮನೆ ಮತ್ತು ಕೆಲಸದ ಮೇಲೆ ಪರಿಣಾಮ ಉಂಟಾಗುತ್ತದೆ. ನಮ್ಮಲ್ಲಿ ಬಹಳಷ್ಟು ಮಂದಿ ಅ...