ಭಾರತ, ಮಾರ್ಚ್ 14 -- ಫ್ರೆಂಚ್ ಫ್ರೈ ಅಂದ್ರೆ ಬಹುತೇಕ ಮಂದಿ ಇಷ್ಟಪಟ್ಟು ತಿಂತಾರೆ. ಹೊರಗೆ ಖರೀದಿಸಿ ಹಾಗೂ ಮನೆಯಲ್ಲೇ ತಯಾರಿಸಿ ತಿಂತಾರೆ. ಇದು ಆಲೂಗಡ್ಡೆಯಿಂದ ಮಾಡುವಂತಹ ಖಾದ್ಯ. ಆದರೆ, ಆಗಾಗ ಫ್ರೆಂಚ್ ಫ್ರೈಸ್ ತಿನ್ನುತ್ತಿದ್ದರೆ ಬೇಸರವಾಗುವುದು ಸಹಜ. ಒಂದೇ ತರಹದ ಸ್ನಾಕ್ಸ್ ತಿನ್ನಲು ಯಾರೂ ಇಷ್ಟಪಡುವುದಿಲ್ಲ. ಹೀಗಾಗಿ ಸಬ್ಬಕ್ಕಿಯಿಂದ ಮಾಡಲಾಗುವ ಫ್ರೈಸ್ ಅನ್ನು ತಯಾರಿಸಬಹುದು. ಮಕ್ಕಳು ಇದನ್ನು ಖಂಡಿತ ಇಷ್ಟಪಟ್ಟು ತಿಂತಾರೆ. ಸಬ್ಬಕ್ಕಿ ಫ್ರೈಸ್ ಮಾಡುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಪದಾರ್ಥಗಳು: ಸಬ್ಬಕ್ಕಿ- ಒಂದು ಕಪ್, ನೀರು- ಅಗತ್ಯಕ್ಕೆ ತಕ್ಕಷ್ಟು, ಆಲೂಗಡ್ಡೆ- ಎರಡು, ಉಪ್ಪು ರುಚಿಗೆ ತಕ್ಕಷ್ಟು, ಕಡಲೆಕಾಯಿ- ಅರ್ಧ ಕಪ್, ಕೊತ್ತಂಬರಿ ಪುಡಿ - ಎರಡು ಚಮಚ, ತುರಿದ ಶುಂಠಿ - ಒಂದು ಚಮಚ, ಬೆಳ್ಳುಳ್ಳಿ- ಒಣಮೆಣಸಿನಕಾಯಿ ಪೇಸ್ಟ್ - ಒಂದು ಚಮಚ, ಜೀರಿಗೆ ಪುಡಿ - ಅರ್ಧ ಚಮಚ, ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು

ತಯಾರಿಸುವ ವಿಧಾನ: ಸಬ್ಬಕ್ಕಿ ಫ್ರೈಸ್ ಮಾಡಲು ಸಬ್ಬಕ್ಕಿಯನ್ನು ಹಿಂದಿನ ರಾತ್ರಿ...