ಭಾರತ, ಮೇ 26 -- ಫ್ರಾನ್ಸ್‌ನ ರಾಜಧಾನಿ, ಪ್ರೇಮನಗರ ಪ್ಯಾರಿಸ್‌ನಲ್ಲಿ 2025ರ ಫ್ರೆಂಚ್ ಓಪನ್ (French Open) ಪಂದ್ಯಾವಳಿ ಆರಂಭವಾಗಿದೆ. ಇದು ಈ ವರ್ಷದ ಎರಡನೇ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿ. ಮೇ 25ರ ಭಾನುವಾರ ಪ್ರತಿಷ್ಠಿತ ಟೆನಿಸ್‌ ಟೂರ್ನಿ ಆರಂಭವಾಗಿದ್ದು, ಜಾಗತಿಕ ಟೆನಿಸ್‌ ತಾರೆಗಳ ಸಮಾಗಮವಾಗಿದೆ. ಟೂರ್ನಿಯ ಆರಂಭದೊಂದಿಗೆ ಟೆನಿಸ್ ಸಂಭ್ರಮ ಕೂಡಾ ಉತ್ತುಂಗಕ್ಕೇರಿದೆ. ಎರಡು ವಾರಗಳ ಕಾಲ ಪ್ರೇಮನಗರಿಯಲ್ಲಿ ಟೆನಿಸ್‌ ಟೂರ್ನಮೆಂಟ್ ಪರ್ವ ಜೋರಾಗಿ ನಡೆಯಲಿದೆ. ನಗರದ ಐತಿಹಾಸಿಕ ಸ್ಟೇಡ್ ರೋಲ್ಯಾಂಡ್ ಗ್ಯಾರೋಸ್‌ ಟೆನಿಸ್‌ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದೆ.

ಗ್ರ್ಯಾಂಡ್ ಸ್ಲ್ಯಾಮ್ ಟೆನಿಸ್ ಟೂರ್ನಿಗಳಲ್ಲಿ ಮಣ್ಣಿನ ಕೋರ್ಟ್‌ನಲ್ಲಿ ನಡೆಯುವ ಏಕೈಕ ಟೂರ್ನಿ ಇದಾಗಿದೆ. ಹೀಗಾಗಿ ಇದು ಪ್ರತಿಷ್ಠಿತ ಟೂರ್ನಿಯೂ ಹೌದು. ಈ ಬಾರಿ ಜೂನ್ 8ರಂದು ಪುರುಷರ ಸಿಂಗಲ್ಸ್ ಫೈನಲ್ ಪಂದ್ಯ ನಡೆಯಲಿದ್ದು, ಪಂದ್ಯಾವಳಿ ಕೊನೆಗೊಳ್ಳಲಿದೆ.

ಬೆಳಗ್ಗಿನ ಅವಧಿಯ ಪಂದ್ಯಗಳು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2:30ಕ್ಕೆ ಆರಂಭವಾಗಲಿದ್ದು, ...