ಭಾರತ, ಜನವರಿ 23 -- ಫ್ಯಾಷನ್‌ ಮಾಡೋದು ಯಾರಿಗೆ ಇಷ್ಟವಾಗೊಲ್ಲ ಹೇಳಿ. ಫ್ಯಾಷನ್‌ ಕ್ಷೇತ್ರದಲ್ಲಿ ಪ್ರತಿಯೊಂದು ದಿನಕ್ಕೊಂದು ಟ್ರೆಂಡ್‌ ಬಂದ್ರೂ ಅದನ್ನು ಅನುಸರಿಸುವ ಜನ ನಮ್ಮ ನಡುವೆ ಇದ್ದಾರೆ. ರಾಶಿಫಲದ ಪ್ರಕಾರ ಈ ಕೆಲವು ರಾಶಿಯವರು ಫ್ಯಾಷನ್‌ ಟ್ರೆಂಡ್‌ ಸೆಟ್ಟರ್‌ಗಳಂತೆ. ಸದಾ ಸ್ಟ್ರೈಲಿಶ್‌ ಆಗಿ ಕಾಣಿಸೋದು ಅಂದ್ರೆ ಇವರಿಗೆ ಬಹಳ ಇಷ್ಟ. ತಮ್ಮ ವಿಭಿನ್ನ ಫ್ಯಾಷನ್‌ ಶೈಲಿಯೊಂದಿಗೆ ಗಮನ ಸೆಳೆವ ರಾಶಿಯವರ ಬಗ್ಗೆ ಇಂದು ತಿಳಿಯೋಣ.

ಈ ರಾಶಿಯವರು ಚಿಂತಕರು. ಇವರು ಫ್ಯಾಷನ್‌ಗೆ ಹೊಸ ಆಲೋಚನೆಗಳನ್ನು ತರುತ್ತಾರೆ. ಇವರ ಶೈಲಿಯು ಭಿನ್ನವಾಗಿರುತ್ತದೆ. ಗಾಢ ಬಣ್ಣ ಇವರಿಗೆ ಇಷ್ಟವಾಗುತ್ತದೆ. ಇವರು ಸ್ಟೈಲಿಶ್‌ ಆಗಿ ಕಾಣಿಸುವ ಮೂಲಕ ಜನರ ಗಮನ ಸೆಳೆಯುತ್ತಾರೆ. ತಮ್ಮ ವಾರ್ಡ್‌ರೋಬ್‌ನಲ್ಲಿ ಭಿನ್ನವಾದ ಉಡುಪುಗಳು ಇರಬೇಕು ಎಂದು ಬಯಸುವ ರಾಶಿಯವರಿವರು.

ಈ ರಾಶಿಯ ಚಿಹ್ನೆಯಂತೆ ಇವರು ಎರಡು ರೀತಿಯ ಸ್ವಭಾವ ಹೊಂದಿರುತ್ತಾರೆ. ಈ ರಾಶಿಯವರು ಹಲವು ಬಗೆಯ ಸ್ಟೈಲ್‌ಗೆ ಒಗ್ಗಿಕೊಳ್ಳುತ್ತಾರೆ. ಮಿಥನ ರಾಶಿಯವರು ಆಗಾಗ ಹೊಸ ಹೊಸ ಬಟ್ಟೆಯಲ್ಲಿ ಕಾ...