ಭಾರತ, ಮೇ 24 -- ಫ್ಯಾಷನ್ ಡಿಸೈನಿಂಗ್‌ (Fashion designing) ಕೋರ್ಸ್‌ಗಳು ಕಳೆದ ಕೆಲವು ವರ್ಷಗಳಿಂದ ಹೆಚ್ಚು ಟ್ರೆಂಡಿಂಗ್‌ನಲ್ಲಿರುವ ಕೋರ್ಸ್‌ ಆಗಿದೆ. ಫ್ಯಾಷನ್‌‌ ಬಗ್ಗೆ ಆಸಕ್ತಿ ಇರುವವರು ಹಾಗೂ ತಮ್ಮ ಸೃಜನಶೀಲತೆಗೆ ಇನ್ನಷ್ಟು ಕೌಶಲ್ಯಗಳನ್ನು ಸೇರಿಸಲು ಬಯಸುವವರು ಈ ಕ್ಷೇತ್ರವನ್ನು ಆಯ್ಕೆ ಮಾಡುತ್ತಾರೆ. ಉತ್ತಮ ಸಂಪಾದನೆ ಸಾಧ್ಯವಾಗಿರುವ ಕ್ಷೇತ್ರಕ್ಕೆ ಕಾಲಿಡಲು ಬಯಸುವವರು ಫ್ಯಾಷನ್‌ ಡಿಸೈನಿಂಗ್‌ ಕಲಿಯಬಹುದು. ನಿಮ್ಮ ಆಸಕ್ತಿ, ವೃತ್ತಿ ಗುರಿಗಳು ಮತ್ತು ಪ್ರಸ್ತುತ ಪರಿಣತಿಯ ಆಧಾರದ ಮೇಲೆ ಸೂಕ್ತ ಕೋರ್ಸ್‌ ಆಯ್ಕೆ ಮಾಡಿಕೊಂಡು, ಈ ಕ್ಷೇತ್ರದಲ್ಲಿ ಮುಂದುವರೆಯಬಹುದು.

ಫ್ಯಾಷನ್ ಡಿಸೈನಿಂಗ್‌ ಎಂಬುದು ವಿನ್ಯಾಸ ತತ್ವಗಳು, ಸೌಂದರ್ಯಶಾಸ್ತ್ರ ಮತ್ತು ತಾಂತ್ರಿಕ ಕೌಶಲ್ಯಗಳನ್ನು ಅನ್ವಯಿಸುವ ಮೂಲಕ ಮೂಲ ಉಡುಪು, ಪರಿಕರಗಳು ಮತ್ತು ಪಾದರಕ್ಷೆಗಳನ್ನು ರಚಿಸುವ ಪ್ರಕ್ರಿಯೆಯಾಗಿದೆ. ಇದಕ್ಕೆ ಸೃಜನಶೀಲತೆ, ಕಲಾತ್ಮಕತೆ, ಕೌಶಲ್ಯ ಮತ್ತು ತಾಂತ್ರಿಕ ಜ್ಞಾನದ ಅಗತ್ಯವಿದೆ. ಈ ಕೋರ್ಸ್‌ ಮೂಲಕ ಇಂಥಾ ಕೌಶಲ್ಯ ವೃದ್ಧಿಸಿಕೊಳ್ಳಬಹುದು....