Bengaluru, ಏಪ್ರಿಲ್ 22 -- ಇತ್ತೀಚಿನ ಫೋಟೋಗಳಲ್ಲಿ ಗ್ಲಾಮರ್ ಡೋಸ್ ಹೆಚ್ಚಿಸಿರುವ ಆಶಿಕಾ ರಂಗನಾಥ್ ಹಾಟ್ ಲುಕ್‌ನಲ್ಲಿ ಬಗೆಬಗೆ ಫೋಟೋಗಳನ್ನು ಶೇರ್‌ ಮಾಡುತ್ತಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಿರುವ ನಟಿ ಆಶಿಕಾ, ವಿದೇಶಿ ಪ್ರವಾಸದ ಫೋಟೋಗಳನ್ನೂ ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ.

ಇದೀಗ ಇನ್‌ಸ್ಟಾಗ್ರಾಂನಲ್ಲಿ ಮತ್ತೊಂದಿಷ್ಟು ಫೋಟೋಗಳನ್ನು ಶೇರ್‌ ಮಾಡಿದ್ದಾರೆ ಆಶಿಕಾ. ನಟಿಯ ಫೋಟೋಗಳಿಗೆ ಅವರ ಅಭಿಮಾನಿಗಳಿಂದ ಮೆಚ್ಚುಗೆಯ ಕಾಮೆಂಟ್‌ಗಳು ಸಂದಾಯವಾಗುತ್ತಿವೆ.

ಸಿನಿಮಾ ವಿಚಾರಕ್ಕೆ ಬಂದರೆ ಸ್ಯಾಂಡಲ್‌ವುಡ್‌ ನಟಿ ಆಶಿಕಾ ರಂಗನಾಥ್‌ ಕನ್ನಡ ಸಿನಿಮಾಗಳಿಗಿಂತ ಹೆಚ್ಚಾಗಿ ಪರಭಾಷೆಯಲ್ಲಿಯೇ ಮಿಂಚುತ್ತಿದ್ದಾರೆ. ಕಳೆದ ವರ್ಷ ಕನ್ನಡದ ಅವತಾರ ಪುರುಷ 2 ಮತ್ತು ಒ2 ಸಿನಿಮಾಗಳು ತೆರೆಗೆ ಬಂದಿದ್ದವು.

ಈ ವರ್ಷ ಆಶಿಕಾ ನಟನೆಯ ಕನ್ನಡದ ಗತವೈಭವ ಎಂಬ ಸಿನಿಮಾ ಬಿಡುಗಡೆಗೆ ರೆಡಿಯಿದೆ. ಇದನ್ನು ಹೊರತುಪಡಿಸಿದರೆ, ಬೇರಾವ ಸಿನಿಮಾ ಅಧಿಕೃತವಾಗಿ ಘೋಷಣೆ ಆಗಿಲ್ಲ. ಅದರ ಜತೆಗೆ ತಮಿಳಿನಲ್ಲಿ ಸರ್ದಾರ್‌ 2 ಮತ್ತು ತೆಲುಗಿನ ವಿ...