ಭಾರತ, ಮಾರ್ಚ್ 9 -- ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಅಚ್ಚರಿ ಏನೆಂದರೆ ನಾಯಕ ರೋಹಿತ್​ ಶರ್ಮಾ ಈ ಟೂರ್ನಿಯ ಒಂದು ಪಂದ್ಯದಲ್ಲೂ ಟಾಸ್ ಗೆದ್ದಿಲ್ಲ. ಇದು ಭಾರತ ತಂಡದ ಸತತ 15ನೇ ಟಾಸ್ ಸೋಲು. ಈ ಪೈಕಿ ರೋಹಿತ್​ ಶರ್ಮಾ ನಾಯಕತ್ವದಲ್ಲಿ ಸೋತಿರುವುದು 12 ಸಲ. ಇದರೊಂದಿಗೆ ಸತತವಾಗಿ ಅತಿ ಹೆಚ್ಚು ಟಾಸ್ ಸೋತ ವಿಶ್ವದ ಮೊದಲ ತಂಡ ಎಂಬ ಕೆಟ್ಟ ದಾಖಲೆಗೆ ಭಾರತ ಪಾತ್ರವಾಗಿದೆ.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಫೈನಲ್​ನಲ್ಲಿ ಭಾರತ ತಂಡವು ಚೇಸ್ ಮಾಡಲಿದೆ. ನ್ಯೂಜಿಲೆಂಡ್ ತಂಡದಲ್ಲಿ ಮಹತ್ವದ ಒಂದು ಬದಲಾವಣೆ ಕಂಡಿದೆ. ತಮ್ಮ ಪ್ರಮುಖ ವೇಗಿಯಾಗಿದ್ದ ಮ್ಯಾಟ್ ಹೆನ್ರಿ ಅವರು ಗಾಯದಿಂದ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ನಾಥನ್ ಸ್ಮಿತ್ ಬಂದಿದ್ದಾರೆ. ಆದರೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ. ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ಪ್ರಶಸ್ತಿ ಸುತ್ತಿನಲ್ಲೂ ಕಣಕ್ಕಿಳಿಯಲಿದೆ.

ವಿಲ್ ಯ...