ಭಾರತ, ಮಾರ್ಚ್ 10 -- ನಾಯಕಿ ಹರ್ಮನ್​ಪ್ರೀತ್​ ಕೌರ್​ ಅವರ ಆಕರ್ಷಕ ಅರ್ಧಶತಕ (54) ಮತ್ತು ಹೀಲಿ ಮ್ಯಾಥ್ಯೂಸ್, ಅಮೆಲಿಯಾ ಕೇರ್​​ ಅವರ (38/3) ಮಾರಕ ಬೌಲಿಂಗ್ ಬಲದಿಂದ ವುಮೆನ್ಸ್ ಪ್ರೀಮಿಯರ್​ ಲೀಗ್​ನ 19ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು, ಗುಜರಾತ್ ತಂಡವನ್ನು 9 ರನ್​ಗಳ ಅಂತರದಿಂದ ಸೋಲಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಇದು ಮುಂಬೈ ಡಿಫೆಂಡ್ ಮಾಡಿಕೊಂಡ ವೇಳೆ ದಾಖಲಿಸಿದ ಮೊದಲ ಗೆಲುವು. ತನ್ನ ಕೊನೆಯ ಲೀಗ್​ ಪಂದ್ಯದಲ್ಲಿ ಗುಜರಾತ್ ಸೋತರೂ ಪ್ಲೇಆಫ್​​ನಲ್ಲಿ ಮುಂಬೈ ಅಥವಾ ಡೆಲ್ಲಿ ವಿರುದ್ಧ ಆಡಲಿದೆ.

ಮುಂಬೈನ ಬ್ರಬೋರ್ನ್​ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ, ನಾಯಕಿ ಹರ್ಮನ್​ ಅವರ ಅಬ್ಬರದ ಅರ್ಧಶತಕದ ನೆರವಿನಿಂದ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ನ್ಯಾಟ್ ಸೀವರ್​ ಬ್ರಂಟ್ ಕೂಡ 38 ರನ್​ಗಳ ಕಾಣಿಕೆ ನೀಡಿದರು. 180 ರನ್​ಗಳ ಗುರಿ ಬೆನ್ನಟ್ಟಿದ ಜಿಜಿ, ಕೊನೆಯಲ್ಲಿ ಭಾರತಿ ಫುಲ್ಮಾಲಿ ಅವರ ಸ್ಫೋಟಕ ಅರ್ಧಶತಕದ ಸಹಾಯದಿಂದ 20 ಓವ...