ಭಾರತ, ಫೆಬ್ರವರಿ 12 -- CBSE Board Exams 2025 FAQs: ಭಾರತದ ಉದ್ದಗಲಕ್ಕೂ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಬೋರ್ಡ್‌ ಪರೀಕ್ಷೆ ಈ ಬಾರಿ ಫೆಬ್ರವರಿ 15 ರಿಂದ ಶುರುವಾಗುತ್ತಿದೆ. 10 ಮತ್ತು 12ನೇ ತರಗತಿಗಳ ಪರೀಕ್ಷೆಗಳು ಫೆಬ್ರವರಿ 15 ರಿಂದ ಏಪ್ರಿಲ್ 2ರ ತನಕ ನಡೆಯಲಿದೆ. ವಿದ್ಯಾರ್ಥಿಗಳು ಸಹಜವಾಗಿ ಪರೀಕ್ಷಾ ಸಿದ್ಧತೆಗಳ ಕಡೆಗೆ ಗಮನಹರಿಸಿರುವ ಈ ಸಂದರ್ಭದಲ್ಲಿ ಪದೇಪದೆ ಎದುರಾಗುವ ಪ್ರಶ್ನೆಗಳು (FAQs) ಮತ್ತು ಸಂದೇಹಗಳನ್ನು ಪಟ್ಟಿಮಾಡಿ ಅವುಗಳ ವಿವರವನ್ನು ಇಲ್ಲಿ ಒದಗಿಸಲಾಗಿದೆ.

ಸಿಬಿಎಸ್‌ಇ 10ನೇ ತರಗತಿಯ ಬೋರ್ಡ್ ಪರೀಕ್ಷೆ ಫೆಬ್ರವರಿ 15ಕ್ಕೆ ಶುರುವಾಗಿ, ಮಾರ್ಚ್‌ 13ಕ್ಕೆ ಕೊನೆಯಾಗಲಿದೆ. ಇದೇ ವೇಳೆ, ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯು ಫೆಬ್ರವರಿ 15 ಕ್ಕೆ ಶುರುವಾಗಿ ಏಪ್ರಿಲ್ 4 ರಂದು ಕೊನೆಗೊಳ್ಳಲಿದೆ. ಪರೀಕ್ಷೆ ಒಂದೇ ಪಾಳಿಯಲ್ಲಿ ಅಂದರೆ ಬೆಳಿಗ್ಗೆ 10.30 ರಿಂದ ಅಪರಾಹ್ನ 1.30ರ ತನಕ ನಡೆಯಲಿದೆ. ಈಗಾಗಲೇ ಪರೀಕ್ಷೆಗೆ ಸಂಬಂಧಿಸಿದ ಅಡ್ಮಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಲಾಗಿದ್ದ...