ಭಾರತ, ಫೆಬ್ರವರಿ 19 -- ಭಾವನೆಗಳ ಬೆಸೆದ ಸುಂದರ ಪ್ರೇಮಕಥೆಯ ಭಾವ ತೀರ ಯಾನ ಸಿನಿಮಾ ಈ ವಾರ ತೆರೆಕಾಣಲಿದೆ. ಹೊಸ ಪ್ರತಿಭೆಗಳು ಸೇರಿ ಮಾಡಿರುವ ಚಿತ್ರಕ್ಕೆ ನಿರ್ದೇಶಕರಾದ ಮಯೂರ್‌ ಅಂಬೆಕಲ್ಲು ಹಾಗೂ ತೇಜಸ್ ಕಿರಣ್ ಸಾರಥಿಗಳಾಗಿದ್ದಾರೆ. ಇದೇ 21ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ 'ಭಾವ ತೀರ ಯಾನ' ಸಿನಿಮಾ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸಾಕಷ್ಟು ಮಾಹಿತಿ ಹಂಚಿಕೊಂಡಿದೆ.

ಫೆಬ್ರವರಿ 21 ಶುಕ್ರವಾರದಂದು ಭಾವ ತೀರ ಯಾನ ಸಿನಿಮಾ ಬಿಡುಗಡೆಯಾಗುತ್ತಿದೆ. ಎರಡು ವರ್ಷಗಳ ಪ್ರಯತ್ನದ ಫಲವಾಗಿ ಈ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಇಲ್ಲಿವರೆಗೂ ಯಾರು ಮಾಡಿರದ ಪ್ರೇಮಕಥೆಯೊಂದನ್ನು ತೋರಿಸುವ ಪ್ರಯತ್ನಪಟ್ಟಿದ್ದೇವೆ ಎಂದು ನಿರ್ದೇಶಕ ಮಯೂರ್‌ ಅಂಬೆಕಲ್ಲು ಹೇಳಿದ್ದಾರೆ. ಲವ್ ಸ್ಟೋರಿ ಅಂದಾಗ ಕಾಮನ್ ಕ್ಲೈಮ್ಯಾಕ್ಸ್ ಇರುತ್ತದೆ. ಆದರೆ, ಪ್ರೀತಿಯ ಹೊಸ ಆಯಾಮವನ್ನು ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದೇವೆ. ಪ್ರೀತಿ ಆಳವನ್ನು ಮನರಂಜನೆ ಜೊತೆಗ ಹೆಣೆದಿದ್ದೇವೆ. ಫೆ 21ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಇಡೀ ಫ್ಯಾಮಿಲಿ ಕು...