ಭಾರತ, ಏಪ್ರಿಲ್ 28 -- ಫುಲೆ ದಂಪತಿಯ ಆತ್ಮಕಥೆ ಹೊಂದಿರುವ ಫುಲೆ ಚಿತ್ರದಲ್ಲಿ ಪತ್ರೀಕ್ ಗಾಂಧಿ ಜ್ಯೋತಿರಾವ್ ಫುಲೆ ಹಾಗೂ ಪತ್ರಲೇಖಾ ಸಾವಿತ್ರಿಬಾಯಿ ಫುಲೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆ ವಿಚಾರದಲ್ಲಿ ವಿಳಂಬ ಎದುರಿಸಿದ್ದ ಈ ಚಿತ್ರ ಕೊನೆಗೂ ಏಪ್ರಿಲ್ 25ಕ್ಕೆ ತೆರೆ ಕಂಡಿದೆ. ಈ ಚಿತ್ರವು ಜಾತಿ ತಾರತಮ್ಯದ ವಿರುದ್ಧದ ಹೋರಾಟ, ಮಹಿಳಾ ಶಿಕ್ಷಣಕ್ಕೆ ಬೆಂಬಲ ಮತ್ತು ಕೆಳ ಸಮುದಾಯಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳ ಮೇಲೆ ಕೇಂದ್ರೀಕರಿಸುತ್ತದೆ. ಫುಲೆ ಸಿನಿಮಾವನ್ನು ನೋಡಲೇಬೇಕು ಎನ್ನಲು 5 ಕಾರಣಗಳು ಹೀಗಿವೆ.

ಭಾರತ ಇತಿಹಾಸದಲ್ಲಿ ಜ್ಯೋತಿರಾವ್ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರದ್ದು ಪ್ರಸಿದ್ಧ ಹೆಸರು. ಇವರು ಸಾಮಾಜಿಕ ಸುಧಾರಣೆಗಾಗಿ ಕೆಲಸ ಮಾಡಿದ್ದರು. ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಜಾತಿವಾದ ಕುರಿತು ಹೋರಾಟ ನಡೆಸಿದ್ದರು. ಭಾರತದ ಮೊದಲ ಬಾಲಕಿಯರ ಶಾಲೆ ಸ್ಥಾಪಿಸಿದ ಕೀರ್ತಿ ಇವರದ್ದು. ಸಮಾಜದ ಕೆಳ ವರ್ಗದ ಸಮುದಾಯಗಳ ಹಕ್ಕುಗಳಿಗಾಗಿ ಇವರು ಪ್ರತಿಪಾದಿಸಿದ್ದರು. ಇವರ ಹೋರಾಟದ ಹಾದಿ ಹೇಗಿತ್ತು ಎಂಬುದನ್ನ...