Bengaluru, ಏಪ್ರಿಲ್ 28 -- ಬೆಂಗಳೂರು: ಫುಡ್ ಕಿಟ್‌ ನಲ್ಲಿಟ್ಟು ಸಾಗಿಸುತ್ತಿದ್ದ 8.5 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಬೆಂಗಳೂರಿನಲ್ಲಿ ಕಂದಾಯ ಗುಪ್ತಚರ ಇಲಾಖೆ (ಡಿಆರ್‌ಐ) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 8.5 ಕೋಟಿ ರೂ. ಮೌಲ್ಯದ 4.5 ಕೆಜಿ ಮೆಥಂಫೈಟಮೈನ್‌ ಎಂಬ ಡ್ರಗ್ಸ್‌ ಅನ್ನು ಜಪ್ತಿ ಮಾಡಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ನೈಜೀರಿಯಾ ಯುವತಿ ಬಳಿ ಇದ್ದ ಮಕ್ಕಳ ಆಹಾರದ ಕಿಟ್‌ ಬ್ಯಾಗ್‌ ನಲ್ಲಿ ಡ್ರಗ್ಸ್ಅಡಗಿಸಿಟ್ಟುಕೊಂಡಿದ್ದಳು. ಈಕೆಯನ್ನು ಎಲೆಕ್ಟ್ರಾನಿಕ್ಸ್‌ ಸಿಟಿ ಸಮೀಪದ ಅರಣ್ಯ ಪ್ರದೇಶದ ಬಳಿ ಬಂಧಿಸಲಾಗಿದೆ. ಈಕೆಯ ಬಳಿ ಇದ್ದ ಕಾರ್ನ್‌ ಫ್ಲೇಕ್ಸ್‌ ಪಾಕೆಟ್‌ ನಲ್ಲಿ ಬಿಳಿ ಬಣ್ಣದ ಮೆಥಂಫೈಟಮೈನ್‌ ಪತ್ತೆಯಾಗಿತ್ತು. ನಂತರ ಪರೀಕ್ಷೆಗೊಳಪಡಿಸಿದಾಗ ಇದು ಡ್ರಗ್ಸ್‌ ಎನ್ನುವುದು ಖಚಿತವಾಗಿತ್ತು. ಈಕೆಯನ್ನು ಎನ್‌ ಡಿಪಿಎಸ್‌ ಕಾಯಿದೆ-1985 ಅಡಿಯಲ್ಲಿ ಈಕೆಯನ್ನು ಬಂಧಿಸಲಾಗಿದೆ. ಈಕೆ ಅಕ್ರಮವಾಗಿ ದೇಶದಲ್ಲಿ ನೆಲಸಿರುವುದು ಪತ್ತೆಯಾಗಿದೆ.

ಮೆಜೆಸ್ಟಿಕ್ ನಲ್ಲಿ ಕಳ್ಳತನವಾಗುವುದು ಹೊಸದೇನಲ್ಲ. ಪ್ರತ...