ಭಾರತ, ಮಾರ್ಚ್ 28 -- ಈ ವರ್ಷ ಪ್ರತಿಷ್ಠಿತ ಫಿಫಾ ಕ್ಲಬ್ ವಿಶ್ವಕಪ್ (FIFA Club World Cup 2025) ನಡೆಯುತ್ತಿದೆ. ಫಿಫಾ ನಡೆಸುವ ಪ್ರತಿಷ್ಠಿತ ಟೂರ್ನಿಗೆ ಬಹುಮಾನ ಮೊತ್ತವನ್ನು ಘೋಷಿಸಿದೆ. ಟೂರ್ನಿಯಲ್ಲಿ ಭಾಗವಹಿಸುವ 32 ಕ್ಲಬ್‌ಗಳಿಗೆ ಒಟು 1 ಬಿಲಿಯನ್ ಯುಎಸ್ ಡಾಲರ್ (ಅಂದಾಜು 8,548 ಕೋಟಿ ರೂ) ಬಹುಮಾನದ ಹಣವನ್ನು ಘೋಷಿಸಲಾಗಿದೆ. ಇದರಲ್ಲಿ ಟೂರ್ನಿಯ ಚಾಂಪಿಯನ್ ತಂಡ ಸೇರಿದಂತೆ ಭಾಗವಹಿಸುವ ಎಲ್ಲಾ ತಂಡಗಳ ಒಟ್ಟು ಬಹುಮಾನ ಮೊತ್ತ ಸೇರಿದೆ. ಚಾಂಪಿಯನ್ ಆಗುವ ಕ್ಲಬ್‌ಗೆ ಬರೋಬ್ಬರಿ 40 ಮಿಲಿಯನ್ ಡಾಲರ್ (340 ಕೋಟಿ ರೂಪಾಯಿಗೂ ಹೆಚ್ಚು) ಬಹುಮಾನ ಸಿಗಲಿದೆ.
ಗುಂಪು ಹಂತದಲ್ಲಿ ಸ್ಪರ್ಧಿಸುವ ತಂಡಗಳು ಆರು ಗುಂಪು ಪಂದ್ಯಗಳಲ್ಲಿ ಪ್ರತಿ ಗೆಲುವಿಗೆ 2 ಮಿಲಿಯನ್ ಯುಎಸ್ ಡಾಲರ್ ಬಹುಮಾನ ಪಡೆಯಲಿವೆ. ಇದೇ ವೇಳೆ ಡ್ರಾ ಸಾಧಿಸಿದರೆ 1 ಮಿಲಿಯನ್ ಡಾಲರ್ ಗಳಿಸುತ್ತವೆ. ಕ್ಲಬ್‌ಗಳು ನಾಕೌಟ್ ಸುತ್ತುಗಳಿಗೆ ಲಗ್ಗೆ ಇಟ್ಟರೆ, ಬಹುಮಾನ ಕೂಡಾ ಗಮನಾರ್ಹವಾಗಿ ಹೆಚ್ಚಾಗುತ್ತವೆ. 16ರ ಸುತ್ತು ಪ್ರವೇಶಿಸಿದರೆ ಹೆಚ್ಚುವರಿ 7.5 ಮಿಲಿಯ...
Click here to read full article from source
To read the full article or to get the complete feed from this publication, please
Contact Us.