Bengaluru, ಏಪ್ರಿಲ್ 28 -- ಜಾಗತಿಕ ಕ್ರಿಕೆಟ್‌ನಲ್ಲಿ ಅತ್ಯಂತ ಜನಪ್ರಿಯ ಹಾಗೂ ಪ್ರತಿಭಾವಂತ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಎನ್ನುವರದಲ್ಲಿ ಯಾವುದೇ ಸಂಶಯವಿಲ್ಲ. ಇದೇ ವೇಳೆ ಅವರು ಅತ್ಯಂತ ಫಿಟ್‌ ಆಟಗಾರನೂ ಹೌದು. ಮೈದಾನದಲ್ಲಿ ಪಾದರಸದಂತೆ ಓಡಾಡುವ ವಿರಾಟ್‌, ತಮ್ಮ ಫಿಟ್‌ನೆಸ್‌ ಹಾಗೂ ಆರೋಗ್ಯದ ಬಗ್ಗೆ ಅಪಾರ ಕಾಳಜಿ ವಹಿಸುತ್ತಾರೆ. ಸೀಮಿತ ಆಹಾರ ಮಾತ್ರವಲ್ಲದೆ, ಮಾಂಸಾಹಾರವನ್ನು ಸಂಪೂರ್ಣವಾಗಿ ಬಿಟ್ಟಿದ್ದಾರೆ. ಆರೋಗ್ಯದ ಬಗ್ಗೆ ಅಪಾರ ಕಾಳಜಿ ಇರುವ ಕಾರಣದಿಂದ ನೀರು ಕುಡಿಯುವಲ್ಲೂ ತುಂಬಾ ಜಾಗರೂಕರಾಗಿರುತ್ತಾರೆ. ಒಂದೇ ಬ್ರಾಂಡ್‌ನ ಆರೋಗ್ಯಕರ ನೀರನ್ನು ಕುರಿಯುತ್ತಾರೆ ಎಂದು ವಿವಿಧ ಮಾಧ್ಯಮ ವರದಿಗಳು ತಿಳಿಸಿವೆ.

ವಿರಾಟ್ ಕೊಹ್ಲಿ ಜೊತೆಗೆ ಅವರ ಪತ್ನಿ ಅನುಷ್ಕಾ ಶರ್ಮಾ ಕೂಡಾ ಫಿಟ್ನೆಸ್ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ನಿತ್ಯ ವ್ಯಾಯಾಮದಿಂದ ಹಿಡಿದು, ಆಹಾರ ಸೇವನೆ, ಜಿಮ್‌ ಹಾಗೂ ನಿದ್ರೆಯ ವಿಷಯದಲ್ಲೂ ಎಚ್ಚರಿಕೆಯಿಂದಿರುತ್ತಾರೆ. ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವಲ್ಲಿ ನಿರ್ದಿಷ್ಟ ಶೈಲಿ ಅನುಸರಿಸುತ್ತಾರೆ...