ಭಾರತ, ಏಪ್ರಿಲ್ 9 -- ಐಪಿಎಲ್‌ನಲ್ಲಿ ಇಂದು (ಏ.9) ಗುಜರಾತ್ ಟೈಟಾನ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲಿದೆ. ಪ್ರಸಕ್ತ ಆವೃತ್ತಿಯಲ್ಲಿ ಸತತ ನಾಲ್ಕನೇ ಗೆಲುವಿಗೆ ಎದುರು ನೋಡುತ್ತಿರುವ 2022ರ ಐಪಿಎಲ್‌ ಚಾಂಪಿಯನ್‌, ಬಲಿಷ್ಠ ಫಾರ್ಮ್‌ನಲ್ಲಿದೆ. ಈಗಾಗಲೇ ಆರ್‌ಸಿಬಿ, ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್‌ ತಂಡಗಳನ್ನು ಸೋಲಿಸಿದೆ. ಪ್ಲೇಆಫ್ ಹಂತಕ್ಕೆ ಪ್ರವೇಶಿಸುವ ಅವಕಾಶ ಹೆಚ್ಚಿಸಿಕೊಳ್ಳಲು ಮುಂದಿನ ಗೆಲುವು ತಂಡದ ಆತ್ಮವಿಶ್ವಾಸ ಹೆಚ್ಚಿಸಲಿದೆ. ಏಪ್ರಿಲ್ 9ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ. ಅತ್ತ, ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಸೋತ ರಾಯಲ್ಸ್, ಆ ನಂತರ ಸಿಎಸ್‌ಕೆ ಹಾಗೂ ಪಂಜಾಬ್‌ ವಿರುದ್ಧ ಭರ್ಜರಿ ಜಯ ಸಾಧಿಸಿದೆ.

ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಆರು ಬಾರಿ ಮಾತ್ರ ಮುಖಾಮುಖಿಯಾಗಿವೆ. ಇದರಲ್ಲಿ 5 ಗೆಲುವುಗಳೊಂದಿಗೆ ಜಿಟಿ ತಂಡವು ಪ್ರಾಬಲ್ಯ ಮೆರೆದಿದೆ. ರಾಜಸ್ಥಾನ್ ರಾಯಲ್ಸ್ ಒಮ್ಮೆ ಮಾತ್ರ ಗೆದ್ದಿದೆ.

ಸದ್ಯ ಎರಡ...