ಭಾರತ, ಫೆಬ್ರವರಿ 2 -- ವಿದೇಶ ಪ್ರವಾಸ ಮಾಡಬೇಕು ಎನ್ನುವುದು ಹಲವರ ಕನಸಾಗಿರುತ್ತದೆ. ಆದರೆ ಬಜೆಟ್ ಹಾಗೂ ಸಮಯ ಹೊಂದಿಸೋದು ಖಂಡಿತ ಕಷ್ಟ ಎನ್ನಿಸುತ್ತದೆ. ಮಾರ್ಚ್‌ ತಿಂಗಳಲ್ಲಿ ನೀವು ಅಂತರರಾಷ್ಟ್ರೀಯ ಪ್ರವಾಸ ಮಾಡಬೇಕು ಅಂತಿದ್ರೆ ಈಗಲೇ ತಯಾರಿ ಶುರು ಮಾಡಬೇಕು. ಮಾರ್ಚ್‌ ತಿಂಗಳಲ್ಲಿ ಭಾರತದಿಂದ ಕಡಿಮೆ ಖರ್ಚಿನಲ್ಲಿ ಭೇಟಿ ನೀಡಬಹುದಾದ ಸುಂದರ ದೇಶವೊಂದರ ಬಗ್ಗೆ ನಾವಿವತ್ತು ಹೇಳುತ್ತೇವೆ.

ಹೌದು ಮಾರ್ಚ್‌ನಲ್ಲಿ ಕಡಿಮೆ ಖರ್ಚಿನಲ್ಲಿ ಭಾರತದಿಂದ ಹೋಗಿ ಬರಬಹುದಾದ ಪ್ರಸಿದ್ಧ ದೇಶ ಮಲೇಷ್ಯಾ. ಸ್ವಚ್ಛಂದ ಆಕಾಶ, ಸುಂದರ ಕಡಲತೀರಗಳಲ್ಲಿ ನಿಮ್ಮ ದಿನವನ್ನು ಕಳೆಯಲು ಮಲೇಷ್ಯಾಗೆ ನೀವು ಭೇಟಿ ನೀಡಬಹುದು. ಹಾಗಾದರೆ ಮಲೇಷ್ಯಾಗೆ ತೆರಳುವ ವಿಮಾನ ವ್ಯವಸ್ಥೆ ಹೇಗೆ, ಅಲ್ಲಿ ಏನೆಲ್ಲಾ ನೋಡಬಹುದು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಮಲೇಷ್ಯಾದ ಕೌಲಾಲಂಪುರಕ್ಕೆ ಭಾರತದ ವಿವಿಧ ಸ್ಥಳಗಳಿಂದ ನೇರ ವಿಮಾನ ಸೌಲಭ್ಯವಿದೆ. ಎಲ್ಲೆಲ್ಲಿಂದ ವಿಮಾನ ಸೌಲಭ್ಯಗಳಿವೆ, ದರ ಎಷ್ಟು ಎನ್ನುವ ವಿವರ ಇಲ್ಲಿದೆ.

* ಪೋರ್ಟ್ ಬ್ಲೇರ್‌ನಿಂದ ವಿಮಾನ ದರ - 2,854 ರ...