Bangalore, ಏಪ್ರಿಲ್ 2 -- Amruthadhaare Serial today Episode: ಹಣಕ್ಕಾಗಿ ಮದುವೆಯಾಗಿ ಮತ್ತೆ ಮೋಸ ಮಾಡುವ ಸುದ್ದಿಗಳು ಆಗಾಗ ಪ್ರಕಟವಾಗುತ್ತ ಇರುತ್ತದೆ. ಗಂಡು ಅಥವಾ ಹೆಣ್ಣು ಈ ರೀತಿ ಮೋಸ ಮಾಡುತ್ತಾರೆ. ವರದಕ್ಷಿಣಿ ತೆಗೆದುಕೊಂಡು ಮದುವೆಯಾಗಿ ಬಳಿಕ ಹಣ, ಒಡವೆ ಎತ್ತಿಕೊಂಡು ಓಡಿ ಹೋಗುವ ಗಂಡಸರು ಇದ್ದಾರೆ. ಇದೇ ರೀತಿ ಮದುವೆಯಾಗಿ ಫಸ್ಟ್‌ ನೈಟ್‌ ಆಗುವ ಮೊದಲೇ ಮನೆಯಲ್ಲಿರುವ ಹಣ, ಒಡವೆ ಎತ್ತಿಕೊಂಡ ಎಷ್ಟೋ ವಧುಗಳಿದ್ದಾರೆ. ಆಗಾಗ ಇಂತಹ ಸುದ್ದಿಗಳು ವರದಿಯಾಗುತ್ತ ಇರುತ್ತವೆ. ಜೀ ಕನ್ನಡ ವಾಹಿನಿಯ ಬುದ್ಧಿವಂತ ನಿರ್ದೇಶಕರು ಇಂತಹದ್ದೇ ಘಟನೆಯನ್ನು ಸೀರಿಯಲ್‌ಗೆ ತಂದಿದ್ದಾರೆ. ಹೌದು, ಅಮೃತಧಾರೆಯಲ್ಲಿ ಈ ರೀತಿಯ ಒಂದು ಘಟನೆ ನಡೆದಿದೆ.

ಜೀ ಕನ್ನಡವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊವನ್ನು ಬಿಡುಗಡೆ ಮಾಡಿದೆ. ಅದರಲ್ಲಿ ದಿಯಾಳ ಮದುವೆ ಪ್ರಸಂಗವಿದೆ. ಈ ಸೀರಿಯಲ್‌ಗೆ ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್‌ನ ಶ್ರಾವಣಿಯು ಅಧಿಕಾರಿಯಾಗಿ ಎಂಟ್ರಿ ನೀಡಿದ್ದಾರೆ. ಪೊಲೀಸರೊಂದಿಗೆ ಬಂದ ಶ್ರಾವಣಿ ದಿಯಾಳನ್ನು...