ಬೆಂಗಳೂರು, ಮೇ 13 -- ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (Central Board of Secondary Education -CBSE) ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟಿಸಿದೆ. ಫಲಿತಾಂಶದ ಪ್ರಕಟವಾದ ನಂತರದ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯನ್ನು ಸುಧಾರಿಸುವ ಸಲುವಾಗಿ, ತನ್ನ ಅನುಕ್ರಮವನ್ನು ಪರಿಷ್ಕರಿಸಿದೆ. ಮಂಡಳಿಯು 10 ಮತ್ತು 12ನೇ ತರಗತಿಯ ಪರೀಕ್ಷಾ ಫಲಿತಾಂಶಗಳಿಗೆ ಸಂಬಂಧಿಸಿದಂತೆ ಕುಂದುಕೊರತೆಗಳಿಗೆ ಪರಿಹಾರವನ್ನು ಬಯಸುವ ವಿದ್ಯಾರ್ಥಿಗಳ ಚಟುವಟಿಕೆಗಳ ಅನುಕ್ರಮವನ್ನು ಪ್ರಮುಖ ಬದಲಾವಣೆ ತಂದಿದೆ. ಅಲ್ಲದೆ ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದೆ.

ಫಲಿತಾಂಶ ಪ್ರಕಟವಾದ ನಂತರ, ಕೆಲವು ವಿದ್ಯಾರ್ಥಿಗಳಿಗೆ ಬಂದ ಅಂಕಗಳಲ್ಲಿ ಸಮಾಧಾನ ಇರುವುದಿಲ್ಲ. ಅಂಥಾ ಸಮಯದಲ್ಲಿ ಮರುಎಣಿಕೆ, ಮರುಮೌಲ್ಯಮಾಪನ, ಅಂಕಗಳ ಪರಿಶೀಲನೆ ಇಂಥಾ ನಿರ್ಧಾರಕ್ಕೆ ಬರುತ್ತಾರೆ. ಮಂಡಳಿ ಬಿಡುಗಡೆ ಮಾಡಿದ ಹೊಸ ಮಾರ್ಗಸೂಚಿಗಳ ಪ್ರಕಾರ, ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ಹೋಗುವ ಮೊದಲು, ಮೌಲ್ಯಮಾಪನ ಮಾಡಿದ ತಮ್ಮ ಉತ್ತರ ...