ಭಾರತ, ಮಾರ್ಚ್ 13 -- ಮಂಗಳೂರು: ಫರಂಗಿಪೇಟೆಯಿಂದ ನಾಪತ್ತೆಯಾಗಿ ಮತ್ತೆ 12 ದಿನಗಳ ಬಳಿಕ ಉಡುಪಿಯಲ್ಲಿ ಪತ್ತೆಯಾದ ಬಾಲಕನೀಗ ತಾಯಿ ಜೊತೆ ತೆರಳಿದ್ದಾನೆ. ಕರ್ನಾಟಕ ಹೈಕೋರ್ಟ್‌ ದಿಗಂತ್‌ಗೆ ಸಂಬಂಧಿಸಿದ ಹೆಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿ, ಆತನನ್ನು ಮನೆಗೆ ಹೋಗುವುದಕ್ಕೆ ಅನುಮತಿಸಿತು.

ಬುಧವಾರ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ಸಂದರ್ಭ, ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಮಾರ್ಗದರ್ಶನದೊಂದಿಗೆ ಹೆತ್ತವರೊಂದಿಗೆ ಬಾಲಕನ ಮಾತುಕತೆ ನಡೆಸಲು ಅವಕಾಶ ಕೊಡುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ಇದರನ್ವಯ ಬುಧವಾರ ಮಂಗಳೂರಿನಲ್ಲಿ ಸಿಡಬ್ಲ್ಯುಸಿ ಸಭೆ ನಡೆದು, ಸಂಜೆ ವೇಳೆ ಬಾಲಕನನ್ನು ಆತನ ತಾಯಿಯೊಂದಿಗೆ ಕಳುಹಿಸಲಾಗಿದೆ.

ಹೆಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯ ವೇಳೆ ಬಾಲಕ ದಿಗಂತ್ ಮನೆಗೆ ಹೋಗಲು ಒಪ್ಪುತ್ತಿಲ್ಲ ಎಂಬ ವಿಚಾರ ಬಂದಿತ್ತು. ಆತ ಮಕ್ಕಳ ಕಲ್ಯಾಣ ಸಮಿತಿ(ಸಿಡಬ್ಲ್ಯೂಸಿ)ಯ ಮುಂದೆ ಮನೆಗೆ ಹೋಗಲು ಒಪ್ಪಿದರೆ ಮನೆಗೆ ಕಳುಹಿಸಿಕೊಡಬಹುದು, ಈ ವಿಚಾರದಲ್ಲಿ ಸಿಡಬ್ಲ್ಯುಸಿಗೆ ನಿರ್ಧಾರ ಕೈಗೊಳ್ಳಬ...