ಭಾರತ, ಮಾರ್ಚ್ 9 -- ಮಂಗಳೂರು: ಬಂಟ್ವಾಳ ತಾಲೂಕಿನ ಫರಂಗಿಪೇಟೆ ಕಿದೆಬೆಟ್ಟು ನಿವಾಸಿ ದಿಗಂತ್ ನಾಪತ್ತೆ ಪ್ರಕರಣವು ಭಾರಿ ಸುದ್ದಿ ಮಾಡಿತ್ತು. ಸುಮಾರು 12 ದಿನಗಳ ಬಳಿಕ ದಿಗಂತ್‌ ಅಚ್ಚರಿಯ ರೀತಿಯಲ್ಲಿ ಪತ್ತೆಯಾಗಿದ್ದಾನೆ. ನಿಗೂಢವಾಗಿ ಕಣ್ಮರೆಯಾಗಿದ್ದ ಪಿಯುಸಿ ವಿದ್ಯಾರ್ಥಿ, ಶನಿವಾರ (ಮಾ. 8) ಉಡುಪಿಯಲ್ಲಿ ಪತ್ತೆಯಾಗಿದ್ದಾನೆ. ನಾಪತ್ತೆಯಾದ ಬಳಿಕ ಮನೆಯವರು ಹಾಗೂ ಸ್ಥಳೀಯರಲ್ಲಿ ಭಯವಿತ್ತು. ಆದರೆ, ಕೊನೆಗೂ ಬಾಲಕ ಪತ್ತೆಯಾಗಿರುವುದು ಮನೆಯವರ ಖುಷಿ ಹೆಚ್ಚಿಸಿದೆ. ಇದಕ್ಕೆ ದೈವ ಪ್ರೇರಣೆಯೇ ಕಾರಣ ಎಂಬ ವಿಚಾರವೂ ಮುನ್ನೆಲೆಗೆ ಬಂದಿದೆ.

ಫರಂಗಿಪೇಟೆಯ ಕಿದೆಬೆಟ್ಟುವಿನಲ್ಲಿ ವಾಸವಿರುವ ದಿಗಂತ್ ಕುಟುಂಬವು, ಕಳೆದ ನಾಲ್ಕು ತಲೆಮಾರುಗಳಿಂದಲೂ ಸಮೀಪದ ಅರ್ಕುಳದ ಉಳ್ಳಾಕುಲು ಮಗೃಂತಾಯ ದೈವದ ಸೇವೆ ಮಾಡುತ್ತಾ ಬರುತ್ತಿದೆ. ಈ ದೈವಸ್ಥಾನದಲ್ಲಿ ನೇಮದ (ಭೂತಕೋಲ) ಸಂದರ್ಭದಲ್ಲಿ ದೈವಕ್ಕೆ ಹಿಡಿಯುವವರು ದಿಗಂತ್ ಸಹೋದರ ರವಿ. ದಿಗಂತ್‌ ನಾಪತ್ತೆಯಾದ ಬೆನ್ನಲ್ಲೇ, ಪೊಲೀಸ್‌ ಹಾಗೂ ಕಾನೂನಿನ ಮೊರೆ ಹೋಗುವುದರ ಜೊತೆಜೊತೆಗೆ ಅವರು ದೈವ ಸಂಕಲ್ಪ...