ಭಾರತ, ಮೇ 19 -- 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಅಂತಿಮ ಹಂತದ ಲೀಗ್ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾಕ್ಕೆ ಮರಳಲಿರುವ ಲುಂಗಿ ಎನ್‌ಗಿಡಿ ಬದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಜಿಂಬಾಬ್ವೆ ಮಾರಕ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಅವರನ್ನು ತಾತ್ಕಾಲಿಕ ಬದಲಿ ಆಟಗಾರರನನ್ನಾಗಿ ನೇಮಿಸಿಕೊಂಡಿದೆ. ಆರ್ಸಿಬಿ ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಸಿದ್ಧತೆ ನಡೆಸುತ್ತಿರುವ ತಮ್ಮ ಆಟಗಾರರ ಜತೆಗೆ ಸೇರುವ ಮೊದಲು ಮೇ 23ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಮುಂದಿನ ತವರಿನ ಪಂದ್ಯಕ್ಕೆ ಎನ್‌ಗಿಡಿ ಲಭ್ಯವಾಗಲಿದ್ದಾರೆ.
6 ಅಡಿ 8 ಇಂಚು ಎತ್ತರದ ಬಲಗೈ ವೇಗಿ ಮುಜರಬಾನಿ ಅವರನ್ನು 75 ಲಕ್ಷ ರೂಗೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಬೌನ್ಸ್ ಎಸೆಯುವುದರಲ್ಲಿ ನಿಸ್ಸೀಮನಾದ ಮುಜರಬಾನಿ, ಕೇವಲ 7.24ರ ಎಕಾನಮಿಯಲ್ಲಿ 127 ಟಿ20 ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಆದರೆ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅವರ ದಾಖಲೆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.