Bangalore, ಏಪ್ರಿಲ್ 20 -- ನಾವೆಲ್ಲಾ ಈ ಪತ್ರಾವಳಿಗಳನ್ನ ಮರೆಯೋಕೆ ಸಾಧ್ಯನಾ? ಈಗ ಹೊಸ ತಲೆಮಾರಿಗೆ ಕೇವಲ ಹದಿನೈದಿಪ್ಪತ್ತು ವರ್ಷದ ಹಿಂದೆ ಊರೆಲ್ಲಾ ಮದುವೆ, ದೇವರ ಕಾರ್ಯ, ಇತರೆ ಇತರೆ ಶುಭ ಸಮಾರಂಭಗಳಿಗೆ ಊಟಕ್ಕೆ ಬಳಸ್ತಾ ಇದ್ದಿದ್ದು ಈ ಪತ್ರಾವಳಿ ಎಂಬ ಮುತ್ತಲೆಲೆಯ ಹಾಳೆ. ಮುತ್ತುಗದ ಮರದ ಎಲೆಗಳನ್ನು ಆಯ್ದು ತಂದು ತೆಂಗಿನ ಕಡ್ಡಿ ಇಂದ ಪೋಣಿಸಿ ಅಂದವಾಗಿ ಪೂರ್ಣ ಚಂದ್ರಾಕಾರವಾಗಿ ರೂಪಿಸಿ ಊಟದ ಎಲೆ ಸಿದ್ಧಪಡಿಸುತ್ತಿದ್ದರು. ಆಹಾ... ನನಗಿನ್ನೂ ನೆನಪಿದೆ. ಒಣಗಿದ ಮುತ್ತುಗದ ಎಲೆಯ ಘಮಲು ಮೂಗಿಗೆ ರಾಚಿದಾಂತಾಗುತ್ತದೆ. ಈ ಮುತ್ತುಗದೆಲೆಯ ಹಾಳೆಯ ಮೇಲೆ ಬಿಸಿಬಿಸಿ ಆಹಾರ ಪದಾರ್ಥ ಬಿದ್ದಾಗಲಂತೂ ಆ ಬಿಸಿ ಹಬೆಯ ಜೊತೆ ಮುತ್ತುಗದ ಎಲೆಯ ಗಂಧವೂ ಮಿಳಿತವಾಗಿ ಮುದನೀಡುತ್ತಿತ್ತು. ಯಾವೊಬ್ಬ ಅತಿಥಿಯೂ ಈ ಮುತ್ತುಗದ ಎಲೆಯ ಆತಿಥ್ಯವನ್ನು ನಿರಾಕರಿಸುತ್ತಿದ್ದಿಲ್ಲ. ಧನಿಕನಿಂದ ಬಡವನ ವರೆಗೆ ಅತಿ ಕಡಿಮೆ ಬೆಲೆಗೆ ದೊರಕುತ್ತಿದ್ದ ಪತ್ರಾವಳಿಗಳು ಈಗ ಬರಿಯ ನೆನಪು. ಊರಿನ ಅಂಗಡಿಗಳ ಮುಂದೆಲ್ಲಾ ಬಣವೆ ಒಟ್ಟುತ್ತಿದ್ದ ದೃಷ್ಯಗಳು ಈಗ ಎಲ್ಲಿಯೂ...