ಭಾರತ, ಫೆಬ್ರವರಿ 18 -- ಭುವನೇಶ್ವರ, ಫೆ 18: ಭುವನೇಶ್ವರದ ಐಕಾನಿಕ್ ಕಳಿಂಗ ಹಾಕಿ ಕ್ರೀಡಾಂಗಣದಲ್ಲಿ ನಡೆದ ಎಫ್‌ಐಎಚ್ ಹಾಕಿ ಪ್ರೊ ಲೀಗ್ 2024-25 (ಪುರುಷರ) ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್ ಜರ್ಮನಿ ತಂಡವು ಭಾರತವನ್ನು 4-1 ಗೋಲುಗಳಿಂದ ಸೋಲಿಸಿತು. ಫ್ಲೋರಿಯನ್ ಸ್ಪೆರ್ಲಿಂಗ್ (7ನೇ ನಿಮಿಷ), ಥೀಸ್ ಪ್ರಿಂಜ್ (14), ಮೈಕೆಲ್ ಸ್ಟ್ರುಥಾಫ್ (48) ಮತ್ತು ರಾಫೆಲ್ ಹಾರ್ಟ್‌ಕೋಫ್ (55) ಅವರು ಗೋಲು ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆ ಗುರ್ಜಂತ್ ಸಿಂಗ್ (13') ಭಾರತದ ಏಕೈಕ ಗೋಲು ಗಳಿಸಿದರು.

ಉಭಯ ತಂಡಗಳ ನಡುವಿನ ಪೈಪೋಟಿ ಪಂದ್ಯವು ಆರಂಭದಿಂದಲೇ ತೀವ್ರವಾಗಿತ್ತು. ಭಾರತ ಸೋತರೂ ಕೊನೆಯ ಕ್ಷಣದರೆಗೂ ಹೋರಾಟ ನಡೆಸಿತು. ದಾಳಿಗೆ ಪ್ರತಿದಾಳಿ ನಡೆಸುವ ಮೂಲಕ ಎದುರಾಳಿಗೆ ತಂಡಕ್ಕೆ ಪ್ರತಿ ನಿಮಿಷದಲ್ಲೂ ಭೀತಿ ಸೃಷ್ಟಿಸಿತ್ತು. ಆದರೆ ರಕ್ಷಣೆ ವಿಚಾರದಲ್ಲಿ ಭಾರತವು ಮಾಡಿದ ಕೆಲವೊಂದು ದೋಷಗಳು ಪಂದ್ಯ ಕಳೆದುಕೊಳ್ಳುವಂತೆ ಮಾಡಿತು. ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಕಂಚಿನ ಪದಕ ವಿಜೇತ ಭಾರತ ತಂಡ ಪ್ರೊ ಲೀಗ್‌ನಲ್...