Bengaluru, ಮಾರ್ಚ್ 20 -- Vidyapati Movie Trailer: ಡಾಲಿ ಧನಂಜಯ್‌ ನಿರ್ಮಾಣದ ವಿದ್ಯಾಪತಿ ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ. ಈಗ ಇದೇ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದ್ದು, ಸಿನಿಮಾ ಬಿಡುಗಡೆ ದಿನಾಂಕವೂ ಘೋಷಣೆ ಆಗಿದೆ. ಸಿನಿಮಾ ಶೀರ್ಷಿಕೆ ವಿದ್ಯಾಪತಿ ಆಗಿರುವುದರಿಂದ, ಈ ಚಿತ್ರದ ಟ್ರೇಲರ್‌ ಾನ್ನು ಪ್ರೇರಣಾ ಪತಿ ಅವರಿಂದ ಬಿಡುಗಡೆ ಮಾಡಿಸಿದೆ ಚಿತ್ರತಂಡ. ಅಂದರೆ, ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ಟ್ರೇಲರ್‌ ರಿಲೀಸ್‌ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.

ಟ್ರೇಲರ್‌ ಬಿಡುಗಡೆ ಮಾಡಿ, ತಂಡಕ್ಕೆ ಶುಭ ಕೋರಿದ ಧ್ರುವ ಸರ್ಜಾ, ಈ ಚಿತ್ರ ಸುರಕ್ಷಿತ ಕೈಗಳಲ್ಲಿದೆ. ಯಾಕಂದರೆ ಯೋಗಿ ಸರ್, ಕಾರ್ತಿಕ್ ಸರ್. ಕೆಆರ್ ಜಿ ಸ್ಟುಡಿಯೋ ರಿಲೀಸ್ ಮಾಡುತ್ತಿದೆ. ಥಿಯೇಟರ್ ಸೆಟ್ ಅಪ್ ಪ್ರಾಮಿಸಿಂಗ್ ಆಗಿ ಇರುತ್ತದೆ. ಈ ಚಿತ್ರ ಏಪ್ರಿಲ್ 10ರಂದು ರಿಲೀಸ್ ಆಗುತ್ತಿದೆ. ದಯವಿಟ್ಟು ಎಲ್ಲರೂ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ. ತುಂಬಾ ಚೆನ್ನಾಗಿ ಇರುತ್ತದೆ. ಏಕೆಂದರೆ ಮನರಂಜನೆ ಖಂಡಿತ ಇದ್ದೇ ಇರುತ್ತದೆ. ನಾಯ...