ಭಾರತ, ಫೆಬ್ರವರಿ 13 -- ಮಂಗಳೂರು: 'ಹೊತ್ತು ಹೊತ್ತಿಗೆ ಹೊಸ ಹೊತ್ತಗೆ' ಎಂಬ ವಿಭಿನ್ನ ಕಲ್ಪನೆಯಡಿ ಮಂಗಳೂರಲ್ಲಿ ಪುಸ್ತಕ ಪ್ರೇಮಿಗಳ ದಿನ ಆಚರಿಸಲಾಗುತ್ತಿದೆ. ಫೆಬ್ರುವರಿ 14 ರಂದು ಜಗತ್ತಿನೆಲ್ಲೆಡೆ ವ್ಯಾಲೆಂಟೈನ್ ಡೇ ಆಚರಿಸಲಾಗುತ್ತದೆ. ಪ್ರೇಮಿಗಳ ದಿನಾಚರಣೆಯನ್ನು ಯುವ ಜೋಡಿಗಳು ಸಂಭ್ರಮದಿಂದ ಆಚರಿಸುತ್ತಾರೆ. ಆದರೆ, ಮಂಗಳೂರಿನಲ್ಲಿ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಅದೇ ದಿನ ಪುಸ್ತಕ ಪ್ರೇಮಿಗಳ ದಿನ ಎಂದು ವಿಶಿಷ್ಟ ರೀತಿಯಲ್ಲಿ ಆಯೋಜಿಸುತ್ತಿದೆ.

ಪುಸ್ತಕ ಓದುವ ಹವ್ಯಾಸ ಹೆಚ್ಚಿಸಬೇಕೆಂಬ ನಿಟ್ಟಿನಲ್ಲಿ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಫೆ.14ನ್ನು ಪುಸ್ತಕ ಪ್ರೇಮಿಗಳ ದಿನವನ್ನಾಗಿ ಆಚರಿಸುತ್ತಿದ್ದು, ಈ ಬಾರಿ 10 ಕೃತಿಗಳು ಬಿಡುಗಡೆಗೊಳ್ಳಲಿವೆ. ಬೆಳಗ್ಗೆ 10 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಪುಸ್ತಕ ಪ್ರೇಮಿಗಳ ದಿನಾಚರಣೆ ನಡೆಯಲಿದೆ.

ಇದನ್ನೂ ಓದಿ: ಕರ್ನಾಟಕದ ಒಂದು ಲಕ್ಷ ಮನೆಗಳಲ್ಲಿ ಬರಲಿವೆ ಓದುವ ಮನೆ: ಪುಸ್ತಕ ಪ್ರಾಧಿಕಾರ ರೂಪಿಸಿರುವ ಮನೆಗೊಂದು ಗ್ರಂಥಾಲಯ ಯೋಜನೆ ವಿಶೇಷವೇ...