ಭಾರತ, ಫೆಬ್ರವರಿ 6 -- ನಮ್ಮ ಪ್ರೀತಿಪಾತ್ರರ ಜೊತೆ ಸುಮಧುರ ಕ್ಷಣಗಳನ್ನು ಕಳೆದು ನೆನಪಿನ ಬುತ್ತಿಯನ್ನು ಕಟ್ಟಿಕೊಳ್ಳಲು ಪ್ರೇಮಿಗಳ ದಿನಕ್ಕಿಂತ ಉತ್ತಮ ಇನ್ನೊಂದಿಲ್ಲ. ಈ ಬಾರಿ ಪ್ರೇಮಿಗಳ ದಿನವನ್ನು ಎಂದಿಗಿಂತ ವಿಶೇಷವನ್ನಾಗಿಸಬೇಕು, ಸುಂದರ ಪ್ರವಾಸಿ ತಾಣಗಳಲ್ಲಿ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಟ್ ಮಾಡಬೇಕು ಅಂತ ಯೋಚನೆ ಮಾಡ್ತಾ ಇದ್ದೀರಾ? ಇದಕ್ಕಾಗಿ ನೀವು ವಿದೇಶಗಳಿಗೆ ಹೋಗಬೇಕು ಅಂತಿಲ್ಲ.

ಭಾರತದಲ್ಲಿ ಹಲವು ಸುಂದರ, ಅದ್ಭುತ ತಾಣಗಳಿವೆ, ಆದರೆ ಈ ತಾಣಗಳ ಬಗ್ಗೆ ಬಹುತೇಕರಿಗೆ ತಿಳಿದಿಲ್ಲದ ಕಾರಣ ಇವು ರಹಸ್ಯವಾಗಿವೆ. ಇಂತಹ ಸ್ಥಳಗಳು ರೊಮ್ಯಾಂಟಿಕ್‌ ಕ್ಷಣಗಳನ್ನು ಜೊತೆಯಾಗಿ ಕಳೆಯಲು ಮಾತ್ರವಲ್ಲ, ಜೊತೆಯಾಗಿ ಸಾಹಸ ಕ್ರೀಡೆಗಳನ್ನು ಕೈಗೊಳ್ಳಲು ಕೂಡ ಹೇಳಿ ಮಾಡಿಸಿದಂತಿವೆ. ಈ ವಿಲಕ್ಷಣ ತಾಣಗಳು ಪ್ರೇಮಿಗಳ ದಿನವನ್ನು ಅನನ್ಯ, ಅದ್ಭುತವನ್ನಾಗಿಸುತ್ತವೆ. ಶಾಂತಿಯುತ ಕಣಿವೆಗಳಿಂದ ಸುಂದರ ಕಡಲತೀರವರೆಗೆ ಪ್ರೇಮಿಗಳ ದಿನಾಚರಣೆಗೆ ಹೇಳಿ ಮಾಡಿಸಿದ ಸುಂದರ ತಾಣಗಳು ಯಾವುವು ನೋಡಿ.

ಹಿಮಾಚಲ ಪ್ರದೇಶದ ಪರ್ವತಗಳಲ್ಲಿ ಅಡಗಿರುವ ತೀರ್ಥನ...