ಭಾರತ, ಫೆಬ್ರವರಿ 13 -- ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾ 'ನಮ್ಮ ಪ್ರೀತಿಯ ರಾಮು' ಮರು ಬಿಡುಗಡೆಯಾಗುತ್ತಿದೆ. ಇದೇ ವಾರ ಫೆಬ್ರವರಿ 14ರಂದು ನೀವು ಮತ್ತೆ ನಟ ದರ್ಶನ್ ಅಭಿನಯದ ಹಿಟ್‌ ಸಿನಿಮಾವನ್ನು ಮತ್ತೆ ತೆರೆಮೇಲೆ ಕಾಣಬಹುದು. ಕ್ರಾಂತಿ ಚಿತ್ರದ ಪ್ರಚಾರದ ಸಮಯದಲ್ಲಿ ನಮ್ಮ ಪ್ರೀತಿಯ ರಾಮು ಮಾದರಿಯಲ್ಲಿ ಮತ್ತೊಂದು ಸಿನಿಮಾ ಮಾಡಿ ಎಂಬ ಕೋರಿಯನ್ನಿಟ್ಟಿದ್ದರು. ಆಗ ದರ್ಶನ್ ಅವರು ಆ ಸಿನಿಮಾದ ಪಾತ್ರವನ್ನು ಮೆಲುಕು ಹಾಕಿದ್ದರು. ದರ್ಶನ್ ಅವರಿಗೆ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದೇ ನಮ್ಮ ಪ್ರೀತಿಯ ರಾಮು ಎಂದರೆ ತಪ್ಪಾಗಲಾರದು. ಅವರ ಅದ್ಭುತವಾದ ಅಭಿನಯಕ್ಕೆ ಸಾಕಷ್ಟು ಜನರ ಮೆಚ್ಚುಗೆ ಸಿಕ್ಕಿತ್ತು. ಅದೇ ಕಾರಣಕ್ಕೆ ಅವರು ಹಲವು ದಿನಗಳು ತಮ್ಮ ಕಣ್ಣಿನ ಸಮಸ್ಯೆಯನ್ನೂ ಅನುಭವಿಸಿದ್ದರು. ಆದರೆ ಸಿನಿಮಾಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡ ರೀತಿ ಹಾಗಿತ್ತು.

ನಮ್ಮ ಪ್ರೀತಿಯ ರಾಮು ನಟ ದರ್ಶನ್‌ ವೃತ್ತಿಜೀವನದ ಅತ್ಯುತ್ತಮ ಚಿತ್ರಗಳಲ್ಲೊಂದು. ಸಂಜಯ್ ಮತ್ತು ವಿಜಯ್ ಜೋಡಿ ನಿರ್ದೇಶಿಸಿದ ನಮ್ಮ ಪ್ರೀತಿಯ ರಾಮು ...