ಭಾರತ, ಫೆಬ್ರವರಿ 11 -- ಪ್ರೀತಿ ವ್ಯಕ್ತಪಡಿಸಲು ಇಂತಹದ್ದೇ ದಿನವಾಗಬೇಕು ಎಂಬುದಿಲ್ಲ. ಪ್ರೇಮ ಎಂಬುದು ವಿವರಿಸಲಾಗದ ಮನಸ್ಸಿನ ಭಾವನೆ, ಅದೊಂದು ವಿಶೇಷ ಅನುಭವ. ಆದರೂ ವರ್ಷಕ್ಕೊಮ್ಮೆ ಬರುವ ಈ ಪ್ರೇಮಿಗಳ ದಿನದಂದು ತಮ್ಮ ಪ್ರೇಯಸಿಗೆ ವಿಶೇಷ ಉಡುಗೊರೆ ನೀಡುವ ಮೂಲಕ ಪ್ರೀತಿ ಮತ್ತು ಭಾವನೆಯನ್ನು ಹಂಚಿಕೊಳ್ಳುವುದರಲ್ಲಿ ಅದೇನೋ ಖುಷಿ ಸಿಗುತ್ತದೆ. ಹಾಗೆಂದು ದುಬಾರಿ ಉಡುಗೊರೆ ನೀಡಿದರೆ ಮಾತ್ರ ಅದು ಪ್ರೀತಿ ಎಂದಾಗುವುದಿಲ್ಲ. ಪ್ರಿಯಕರ ಕೊಡುವ ಉಡುಗೊರೆಗೆ ಬೆಲೆ ಕೊಟ್ಟಲು ಸಾಧ್ಯವಿಲ್ಲ.

ಅಂದ ಹಾಗೆ, ನಿಮ್ಮ ಪ್ರೇಯಸಿಗೆ ಅತ್ಯುತ್ತಮವಾದ ಉಡುಗೊರೆ ಕೊಡಬೇಕು ಆದರೆ ಬಜೆಟ್ ಫ್ರೆಂಡ್ಲಿ ಆಗಿರಬೇಕು ಅಂತಿದ್ದೀರಾ, ಹಾಗಾದರೆ ನಿಮ್ಮ ಪಾಕೆಟ್‌ಗೆ ಬರೆ ಬೀಳದೆ 500 ರೂ ಒಳಗೆ ಸಿಗುವ ಅತ್ಯುತ್ತಮ ಉಡುಗೊರೆಗಳ ಬಗ್ಗೆ ಇಲ್ಲಿದೆ ಮಾಹಿತಿ ನೀಡಲಾಗಿದೆ.

ಇತ್ತೀಚಿನ ದಿನಗಳಲ್ಲಿ ಸ್ಟೈಲಿಶ್ ಆಗಿರುವ ಫ್ಯಾನ್ಸಿ ನೆಕ್ಲೇಸ್‌ಗಳು ಸಾಕಷ್ಟು ಟ್ರೆಂಡ್‌ನಲ್ಲಿವೆ. ಒಂದಕ್ಕಿಂತ ಒಂದು ಸುಂದರವಾಗಿರುವ ಈ ನೆಕ್ಲೇಸ್‌ಗಳು ಸೀರೆ, ಚೂಡಿದಾರ್ ಹಾಗೂ ವೆಸ್ಟರ್ನ್‌...