ಭಾರತ, ಫೆಬ್ರವರಿ 10 -- ವಾಲೆಂಟೈನ್ಸ್ ಡೇ ಬಂದೇ ಬಿಟ್ಟಿತು, ಈ ಸಮಯದಲ್ಲಿ ಮನ ಮೆಚ್ಚಿದ ವ್ಯಕ್ತಿಗೆ ವಿಶೇಷ ಉಡುಗೊರೆ ನೀಡುವ ಮೂಲಕ ಪ್ರೇಮಿಗಳ ದಿನವನ್ನು ಸಂಭ್ರಮಿಸಲಾಗುತ್ತದೆ. ಹೆಣ್ಣುಮಕ್ಕಳಿಗೆ ಗಿಫ್ಟ್ ಕೊಡೋದು ಅಂತ ಬಂದ್ರೆ ಚಾಕೋಲೇಟ್, ಗುಲಾಬಿ ಹೂಗಳು, ಅಥವಾ ಪಾಂಡಾ ಟಾಯ್ಸ್... ಹೀಗೆ ಆಯ್ಕೆಗಳು ಹಲವಿವೆ. ಆದರೆ ಹುಡುಗರಿಗೆ ಗಿಫ್ಟ್ ಆಯ್ಕೆ ಮಾಡೋದು ಸ್ವಲ್ಪ ಯೋಚನೆ ಮಾಡಬೇಕಾದ ವಿಚಾರ. ಪ್ರತಿ ವರ್ಷವೂ ಒಂದೇ ತರಹದ ಗಿಫ್ಟ್ ಕೊಡೋದು ಬೇಸರ, ಅಲ್ಲವೇ? ಈ ಬಾರಿ ಏನಾದರೂ ಹೊಸದಾಗಿ, ಅರ್ಥಪೂರ್ಣವಾಗಿ ಹಾಗೂ ಅವನಿಗೆ ತೃಪ್ತಿ ಕೊಡುವಂತದ್ದು ಆಯ್ಕೆ ಮಾಡುವ ಆಸೆ ಇದ್ಯಾ. ಹಾಗಾದರೆ ಮುಂದೆ ಓದಿ.

ನಿಮ್ಮ ಗೆಳೆಯನಿಗೆ ಅಥವಾ ಪತಿಯೊಡನೆ ಕಳೆದ ಕ್ಷಣಗಳನ್ನು ನೆನಪಿಸಿಕೊಳ್ಳಿ, ಅವನಿಗೆ ಯಾವ ತರಹದ ವಸ್ತುಗಳು ಖುಷಿ ಕೊಡಬಹುದು? ಅವನ ಆಸಕ್ತಿಗಳು, ಹವ್ಯಾಸಗಳು, ಡೈಲಿ ಯೂಸೇಜ್ ಇವುಗಳನ್ನೆಲ್ಲಾ ಗಮನಿಸಿ ಗಿಫ್ಟ್ ಆಯ್ಕೆ ಮಾಡಿದರೆ ಅದು ಕೇವಲ ವಸ್ತುವಾಗಿರದೆ, ನಿಮ್ಮ ಸ್ನೇಹ, ಪ್ರೀತಿ, ಆರೈಕೆಯ ಪ್ರತೀಕವಾಗಬಹುದು. ಇನ್ನು ಹೆಚ್ಚು ಯೋಚನೆ ಮಾಡ...