ಭಾರತ, ಫೆಬ್ರವರಿ 8 -- ಈ ಬಾರಿಯ ಪ್ರೇಮಿಗಳ ದಿನಕ್ಕಾಗಿ ಹಲವು ಪ್ರೇಮಿಗಳು ಕಾಯುತ್ತಿದ್ದಾರೆ. ಪ್ರೇಮಿಗಳ ವಾರದ ಸಂಭ್ರಮ ಈಗಾಗಲೇ ಆರಂಭವಾಗಿದ್ದು, ಹಲವು ಜೋಡಿ ಹಕ್ಕಿಗಳು ಆಚರಣೆ ಶುರು ಮಾಡಿದ್ದಾರೆ. ಈ ನಡುವೆ ಹಲವು ಹೃದಯಗಳು ಪ್ರೀತಿಯ ಬಂಧಕ್ಕೆ ಒಳಗಾಗಿ ಒಂದೊಳ್ಳೆ ಮನಸ್ಸಿನ ಒಡನಾಟ ಬೆಳೆಸಲು ಸಂಗಾತಿಯನ್ನು ಹುಡುಕುತ್ತಿವೆ. ಜ್ಯೋತಿಷ್ಯದ ಪ್ರಕಾರ, ಈ ಬಾರಿಯ ಪ್ರೇಮಿಗಳ ದಿನದ ಸಮಯದಲ್ಲಿ ಯಾವ ರಾಶಿಚಕ್ರ ಚಿಹ್ನೆಗಳ ಜನರು ಪ್ರೀತಿಯ ಬಂಧನಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ ಎಂಬುದರ ಕುರಿತು ಎಂಬುದರ ಕುರಿತು ಖ್ಯಾತ ಜ್ಯೋತಿಷಿ ಸುಂದೀಪ್ ಕೊಚಾರ್ ಭವಿಷ್ಯ ನುಡಿದಿದ್ದಾರೆ.

ಈ ಬಾರಿಯ ಪ್ರೇಮಿಗಳ ದಿನವು ಮೇಷ, ಮಿಥುನ, ಸಿಂಹ, ತುಲಾ ಮತ್ತು ಧನು ರಾಶಿಯವರಿಗೆ ಪ್ರೇಮಾಂಕುರವಾಗುವ ಸಾಧ್ಯತೆ ಇದೆ. ಅಂದ್ರೆ ಖಚಿತವಾಗಿ ಪ್ರೇಮಜೀವನ ಆರಂಭವಾಗುತ್ತದೆ ಎಂದಲ್ಲ. ಒಂದೊಳ್ಳೆ ಹೊಸ ಅನುಭವ, ಹೊಸತನದತ್ತ ತೆರೆದುಕೊಳ್ಳುವುದು ಕೂಡಾ ಆಗಿರಬಹುದು.

ಸದಾ ಉತ್ಸಾಹದ ಚಿಲುಮೆಯಂತಿರುವ ಮೇಷ ರಾಶಿಯವರು, ದಿಟ್ಟ ನಡೆ ಮತ್ತು ಸಾಹಸಮಯ ಸ್ವಭಾವ ಹೊಂದಿದ್ದ...