ಭಾರತ, ಫೆಬ್ರವರಿ 7 -- Anamadheya Ashok Kumar Review: ಕನ್ನಡದಲ್ಲಿ ಇತ್ತೀಚೆಗೆ ಸಾಕಷ್ಟು ಥ್ರಿಲ್ಲರ್ ಚಿತ್ರಗಳು, ಮರ್ಡರ್ ಮಿಸ್ಟ್ರಿಗಳು ಬಂದಿವೆ. ಆ ಪೈಕಿ ಈ ವಾರ ಬಿಡುಗಡೆಯಾದ 'ಅನಾಮಧೇಯ ಅಶೋಕ್‍ ಕುಮಾರ್' ಸಹ ಒಂದು. ಸಂಜೆ ಆರರಿಂದ ಬೆಳಗ್ಗೆ ಆರರವರೆಗೂ 12 ಗಂಟೆಗಳ ಅವಧಿಯಲ್ಲಿ ನಡೆಯುವ ಕಥೆ ಪ್ರೇಕ್ಷಕರನ್ನು ಸೀಟಿನಂಚಿನಲ್ಲಿ ತಂದು ಕೂರಿಸುತ್ತದೆ.

'ಅನಾಮಧೇಯ ಅಶೋಕ್‍ ಕುಮಾರ್' ಪ್ರಾರಂಭವಾಗುವುದು ಪ್ರಜ್ಞೆ ತಪ್ಪಿಬಿದ್ದಿದ್ದ ಪತ್ರಕರ್ತ ಪ್ರವೀಣ್ ರಾಜಶೇಖರ್ (ಕಿಶೋರ್ ಕುಮಾರ್) ಪ್ರಜ್ಞೆ ಬಂದು ಎದ್ದು ಕೂರುವ ಮೂಲಕ. ಒಳಗೆ ಹೋಗಿ ನೋಡಿದರೆ, ತಾನು ಸಂದರ್ಶನ ಮಾಡುವುದಕ್ಕೆ ಬಂದಿದ್ದ ಪ್ರಖ್ಯಾತ ಕ್ರಿಮಿನಲ್‍ ಲಾಯರ್ ಆನಂದ್‍ ಭಟ್‍ ಕೊಲೆಯಾಗಿರುತ್ತದೆ. ಅವನಿಗೆ ಮನೆಯಲ್ಲಿ ಇನ್ನೂ ಯಾರೋ ಇರುವ ಅನುಮಾನ ಮೂಡುತ್ತದೆ. ತನ್ನ ಆತ್ಮರಕ್ಷಣೆಗಾಗಿ ಆತನನ್ನೂ ಕೊಲೆ ಮಾಡುವ ಪ್ರವೀಣ್‍ಗೆ, ಆತ ಮಾಜಿ ಪೊಲೀಸ್ ಕಮಿಷನರ್ ಎಂದು ಗೊತ್ತಾಗುತ್ತದೆ. ಶರಣಾಗುವ ಪ್ರವೀಣ್‍ನನ್ನು ಪೊಲೀಸರು ಒಂದು ಜಾಗಕ್ಕೆ ಕರೆದುಕೊಂಡು ಹೋಗಿ ತನಿಖೆ ಪ್ರಾರ...