ಭಾರತ, ಏಪ್ರಿಲ್ 6 -- ಕಲರ್ಸ್ ಕನ್ನಡದ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಒಂದಾದ ಲಕ್ಷ್ಮೀ ಬಾರಮ್ಮ ಇನ್ನೇನು ಮುಕ್ತಾಯವಾಗಲಿದೆ. ಟಿಆರ್‌ಪಿಯಲ್ಲಿ ಟಾಪ್ ಇದ್ರೂ ಇದ್ದಕ್ಕಿದ್ದ ಹಾಗೆ ಧಾರಾವಾಹಿ ಮುಗಿಸುವ ನಿರ್ಧಾರಕ್ಕೆ ಬಂದಿದೆ ವಾಹಿನಿ. ಇದೀಗ ಧಾರಾವಾಹಿಯ ಅಂತಿಮ ಸಂಚಿಕೆಗಳು ಪ್ರಸಾರವಾಗುತ್ತಿವೆ. ಈ ಹೊತ್ತಿನಲ್ಲಿ ಧಾರಾವಾಹಿಯಲ್ಲಿ ಇನ್ನೊಂದು ಟ್ವಿಸ್ಟ್ ಎದುರಾಗಲಿದೆ ಎನ್ನಲಾಗುತ್ತಿದೆ. ಇದಕ್ಕೆ ಹಿಂಟ್ ಕೊಟ್ಟಿದ್ದು ಲಕ್ಷ್ಮೀ ಬಾರಮ್ಮದ ಸುಪ್ರಿತಾ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿರುವ ಫೋಟೊಗಳು.

ಲಕ್ಷ್ಮೀ ಬಾರಮ್ಮ ಧಾರಾವಾಹಿ ಮುಕ್ತಾಯವಾಗುತ್ತಿರುವ ಕಾರಣ ಅಂತಿಮ ಸಂಚಿಕೆ ಹಾಗೂ ಧಾರಾವಾಹಿ ಸೆಟ್‌ನಲ್ಲಿ ಕಳೆದ ಕೆಲವು ಫೋಟೊಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ ಸುಪ್ರಿತಾ ಅಲಿಯಾಸ್ ರಜನಿ ಪ್ರವೀಣ್‌. ಅವರು ಹಂಚಿಕೊಂಡಿರುವ ವಿಡಿಯೊದಲ್ಲಿ ಲಕ್ಷ್ಮೀ ಬಾರಮ್ಮ ಸೆಟ್‌ನಲ್ಲಿ ಅವರು ಕಳೆದ ಖುಷಿಯ ಹಾಗೂ ಮೋಜಿನ ಕ್ಷಣಗಳ ಫೋಟೊಗಳಿವೆ. ಇದರಲ್ಲಿ ಒಂದು ಫೋಟೊ ಮಾತ್ರ ಈಗ ಭಾರಿ ವೈರಲ್ ಆಗುತ್ತಿದೆ. ಅದು ಲಕ್ಷ್ಮೀ ಸೀಮಂತದ...