ಭಾರತ, ಏಪ್ರಿಲ್ 1 -- ಶಾಂತಿ ನಿವಾಸ, ಮೈನಾ, ಸೂರ್ಯವಂಶ, ನಾತಿಚರಾಮಿ, ಚಿಕ್ಕೆಯಜಮಾನಿ ಸೇರಿದಂತೆ ಹಲವು ವಿಭಿನ್ನ ಕಥಾಹಂದರವಿರುವ ಧಾರಾವಾಹಿಗಳು ಪ್ರಸಾರವಾಗುತ್ತಿರುವ ಉದಯ ವಾಹಿನಿಯಲ್ಲಿ ಮತ್ತೊಂದು ಹೊಸ ಧಾರಾವಾಹಿ ಬರಲು ಸಜ್ಜಾಗಿದೆ. ಇತ್ತೀಚೆಗೆ ರಾಧಿಕಾ ಧಾರಾವಾಹಿ ಅಂತ್ಯವಾಗಿದ್ದು, ಹೊಸ ಧಾರಾವಾಹಿ'ಸಿಂಧು ಭೈರವಿ' ಪ್ರಸಾರಕ್ಕೆ ಸಿದ್ಧವಾಗಿದೆ.

ಏಪ್ರಿಲ್ 7ರಿಂದ ಸಂಜೆ 7 ಗಂಟೆಗೆ 'ಸಿಂಧು ಭೈರವಿ' ಧಾರಾವಾಹಿ ಪ್ರಸಾರವಾಗಲಿದೆ. ಭಾವನೆಗಳ ರಣರಂಗದಲ್ಲಿ ದ್ವೇಷ - ಪ್ರೀತಿಗಳ ಸಂಘರ್ಷ, ಪ್ರೀತಿ ಮತ್ತು ನ್ಯಾಯಕ್ಕಾಗಿ ಸಿಂಧು ಎಂದು ಈ ಧಾರಾವಾಹಿಗೆ ಟ್ಯಾಗ್‌ಲೈನ್ ನೀಡಲಾಗಿದೆ. ಇಂಚರಾ ಶೆಟ್ಟಿ ಹಾಗೂ ಜೇಯ್‌ ಡಿಸೂಝಾ ಈ ಧಾರಾವಾಹಿಯಲ್ಲಿ ನಾಯಕ ಹಾಗೂ ನಾಯಕಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಸಿದ್ಧ ಕಿರುತೆರೆ ನಟಿ ರೇಖಾ ವಸುಂಧರಾ ಬಹುದ್ದೂರ್ ಎಂಬ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.

ಅದು ಅಕ್ಕ-ತಂಗಿಯ ನಡುವಿನ ಅನುಬಂಧದ ಕತೆಯೂ ಹೌದು, ಅಕ್ಕನ ಪ್ರೀತಿಗಾಗಿ ತಂಗಿ ಭೈರವಿಯಾಗುವ ಕಥೆಯೂ ಹೌದು. ಈಗಾಗಲೇ ಧಾರಾವಾಹಿ ಪ್ರೊಮೊಗಳನ...