ಭಾರತ, ಮಾರ್ಚ್ 1 -- ಪ್ರಿ-ಡಯಾಬಿಟಿಸ್ ಎನ್ನುವುದು ರಕ್ತದಲ್ಲಿನ ಸಕ್ಕರೆ ಮಟ್ಟ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾಗಿರುವ, ಆದರೆ ಡಯಾಬಿಟಿಸ್ ಎಂಬ ಹಂತವನ್ನು ತಲುಪಿಲ್ಲದ ಸ್ಥಿತಿಯನ್ನು ಸೂಚಿಸುತ್ತದೆ. ಇದು ಡಯಾಬಿಟಿಸ್ ಮತ್ತು ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಪ್ರಿ-ಡಯಾಬಿಟಿಸ್ ಪತ್ತೆಯಾದ ಕೂಡಲೇ ಸಕಾಲದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದರಿಂದ ಪೂರ್ಣ ಡಯಾಬಿಟಿಸ್ ಸ್ಥಿತಿಯನ್ನು ತಡೆಯಲು ಸಾಧ್ಯವಾಗುತ್ತದೆ. ವ್ಯಕ್ತಿಯು ಟೈಪ್ 2 ಮಧುಮೇಹವನ್ನು ಅಭಿವೃದ್ಧಿಪಡಿಸುವ ಮುನ್ನದ ಬೆಳವಣಿಗೆಗೆ ಪ್ರಿ-ಡಯಾಬಿಟಿಸ್ ಎಂದು ಕರೆಯುತ್ತಾರೆ. ಪ್ರಿ-ಡಯಾಬಿಟಿಸ್ ಅನ್ನು ಹೇಗೆ ನಿರ್ವಹಿಸುವುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಆಹಾರದಲ್ಲಿ ಬದಲಾವಣೆ: ಪೌಷ್ಠಿಕಾಂಶಯುಕ್ತ ಆಹಾರಗಳನ್ನು ದಿನಚರಿಯಲ್ಲಿ ಸೇರಿಸಿ. ಹೆಚ್ಚು ಹಣ್ಣು, ತರಕಾರಿಗಳು, ಸಂಪೂರ್ಣ ಧಾನ್ಯಗಳು, ಮತ್ತು ಆರೋಗ್ಯಕರ ಕೊಬ್ಬುಗಳನ್ನು ತಿನ್ನಬೇಕು. ರಫಿನ್ಡ್ ಶುಗರ್, ಜಂಕ್ ಫುಡ್, ಮತ್ತು ಹೈ ಕಾರ್ಬೊಹೈಡ್ರೇಟ್ ಆಹಾರಗಳನ್ನು ತ್ಯಜಿಸಬೇಕು. ಪ್ರೋಟೀನ್ ಮತ್ತು ನಾರಿನಂಶ ಹ...