ಭಾರತ, ಮಾರ್ಚ್ 15 -- ಬೆಂಗಳೂರು: ವಿಧಾನಮಂಡಲದಲ್ಲಿ ಬಜೆಟ್ ಅಧಿವೇಶನದ ಕಲಾಪ ಮುಂದುವರಿದಿದೆ. ವಿಧಾನ ಪರಿಷತ್ ಹಾಗೂ ವಿಧಾನ ಸಭೆಗಳ ಕಲಾಪ ಅನೇಕ ಸಂದರ್ಭಗಳಲ್ಲಿ ಬಹಳ ಕುತೂಹಲಕರವಾಗಿರುತ್ತದೆ. ಸ್ವಾರಸ್ಯಕರ ಚರ್ಚೆಗೂ ವೇದಿಕೆ ಒದಗಿಸುತ್ತದೆ. ಹಾಸ್ಯ ಪ್ರಸಂಗಗಳಿಗೂ ಸಾಕ್ಷಿಯಾಗುತ್ತದೆ. ಅಂಥದ್ದೇ ಒಂದು ಸನ್ನಿವೇಶ ನಿನ್ನೆ (ಶುಕ್ರವಾರ ಮಾರ್ಚ್ 14) ವಿಧಾನಪರಿಷತ್‌ ಕಲಾಪದ ವೇಳೆ ನಡೆಯಿತು.

ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೌಲ್ಯಮಾಪನ ಸೇರಿ ವಿವಿಧ ಸೇವೆಗಳಿಗೆ ಪಾವತಿಸಿದ್ದ ಹಣದ ಮಾಹಿತಿ ಬಹಿರಂಗಪಡಿಸದ ಕರ್ನಾಟಕ ಸರ್ಕಾರದ ನಡೆ ಶುಕ್ರವಾರವೂ ವಿಧಾನ ಪರಿಷತ್‌ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಟೀಕೆಗೂ ಗುರಿಯಾಯಿತು.

ವಿಧಾನ ಪರಿಷತ್‌ನಲ್ಲಿ ಜೆಡಿಎಸ್ ಸದಸ್ಯ ಟಿ.ಎಸ್‌. ಶರವಣ ಈ ವಿಚಾರ ಪ್ರಸ್ತಾಪಿಸಿದ್ದು, ಸರ್ಕಾರದ ಐದು ಗ್ಯಾರಂಟಿ ಯೋಜನೆಯ ಮೌಲ್ಯಮಾಪನಕ್ಕೆ ಹಲವು ಸಂಸ್ಥೆಗಳನ್ನು ಬಳಸಿಕೊಳ್ಳಲಾಗಿದೆ. ಆದರೆ, ಎರಡು ಸಂಸ್ಥೆಗಳ ಮಾಹಿತಿಯನ್ನು ನೀಡದೆ ಮುಚ್ಚಿಡಲಾಗಿದೆ. ರೈಟ್‌ ಪೀಪಲ್‌ ಸಂಸ್ಥೆಗೆ ಸರ್ಕಾರ ಪಾವತಿಸಿದ 9...