Bengaluru, ಏಪ್ರಿಲ್ 29 -- ಅರ್ಥ: ಯಾರು ಹರ್ಷಪಡುವುದಿಲ್ಲವೋ ದುಃಖಪಡುವುದಿಲ್ಲವೋ, ಯಾರು ಶೋಕಿಸುವುದಿಲ್ಲವೋ ಬಯಸುವುದಿಲ್ಲವೋ, ಯಾರು ಶುಭಾಶುಭಗಳನ್ನು ಪರಿತ್ಯಾಗ ಮಾಡುತ್ತಾರೆಯೋ ಅಂತಹ ಭಕ್ತನು ನನಗೆ ಬಹು ಪ್ರಿಯನಾದವನು.

ಭಾವಾರ್ಥ: ಭಕ್ತನಾದವನಿಗೆ ಪ್ರಾಪಂಚಿಕ ಲಾಭದಿಂದ ಹರ್ಷವಿಲ್ಲ; ನಷ್ಟದಿಂದ ದುಃಖವಿಲ್ಲ. ಮಗನನ್ನೋ ಶಿಷ್ಯನನ್ನೋ ಪಡೆಯಬೇಕೆಂಬ ಬಲವಾದ ಆಕಾಂಕ್ಷೆ ಇಲ್ಲ. ಅವರನ್ನು ಪಡೆಯದಿದ್ದರೆ ದುಃಖವಿಲ್ಲ. ತನಗೆ ಪ್ರಿಯವಾದುದನ್ನು ಕಳೆದುಕೊಂಡರೆ ಆತನು ಶೋಕಿಸುವುದಿಲ್ಲ. ಹಾಗೆಯೇ ತಾನು ಬಯಸಿದ್ದನ್ನು ಪಡೆಯದಿದ್ದರೆ ಅವನಿಗೆ ಸಂಕಟವಿಲ್ಲ. ಎಲ್ಲ ಬಗೆಯ ಶುಭಾಶುಭಗಳು, ಪಾಪಕಾರ್ಯಗಳು ಎದುರಾದಾಗ ಅವನು ಅವನ್ನು ಮೀರುತ್ತಾನೆ. ಪರಮ ಪ್ರಭುವಿನ ತೃಪ್ತಿಗಾಗಿ ಅವನು ಎಲ್ಲ ಬಗೆಯ ಅಪಾಯಗಳನ್ನು ಸ್ವೀಕರಿಸಲು ಸಿದ್ದನಾಗಿರುತ್ತಾನೆ. ಅವನ ಭಕ್ತಿಸೇವೆಗೆ ಅಡ್ಡಿ ಎನ್ನುವುದೇ ಇಲ್ಲ. ಇಂತಹ ಭಕ್ತನು ಕೃಷ್ಣನಿಗೆ ಬಹು ಪ್ರಿಯನಾದವನು.

ಇದನ್ನೂ ಓದಿ: ಕಲ್ಮಶ ಮನಸ್ಸಿನಿಂದ ಮುಕ್ತರಾಗಿ, ಪರಿಶುದ್ಧ ಸೇವೆ ಮಾಡುವವರು ಪರಮಾತ್ಮನಿಗೆ ಪ್ರಿಯರ...