ಭಾರತ, ಏಪ್ರಿಲ್ 24 -- ಹಿಂದಿನ ಕಾಲದಿಂದಲೂ ಹೆಣ್ಣನ್ನು ಸೌಂದರ್ಯದಿಂದ ಅಳೆಯಲಾಗುತ್ತಿತ್ತು. ಹೆಣ್ಣು ಎಂದರೆ ಸೌಂದರ್ಯ ಎಂಬ ಭಾವನೆ ಇತ್ತು. ಆದರೆ ಸೌಂದರ್ಯವೇ ಅಂತಿಮವಲ್ಲ, ಸೌಂದರ್ಯಕ್ಕಿಂತಲೂ ಮಿಗಿಲಾದದ್ದು ಪ್ರತಿಭೆ. ಹೆಣ್ಣುಮಕ್ಕಳನ್ನು ಸೌಂದರ್ಯದಿಂದ ಅಳೆಯುವುದನ್ನು ನಿಲ್ಲಿಸಿ, ಅವರ ಪ್ರತಿಭೆ ಹಾಗೂ ಬುದ್ಧಿವಂತಿಕೆಯನ್ನೂ ಗುರುತಿಸಬೇಕು. ಅದೆಷ್ಟೋ ಹೆಣ್ಣುಮಕ್ಕಳಲ್ಲಿ ಅಪಾರ ಬುದ್ಧಿವಂತಿಕೆ ಇರುತ್ತದೆ. ಆದರೆ ಅವರು ಅಂದವಾಗಿಲ್ಲ ಎಂಬ ಕಾರಣಕ್ಕೆ ಅವರಲ್ಲಿರುವ ಪ್ರತಿಭೆಯನ್ನು ಅಲ್ಲಗೆಳೆಯಲಾಗುತ್ತದೆ.

ಆದರೆ ನಾವೆಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಒಂದು ವಿಚಾರ ಎಂದರೆ ಸೌಂದರ್ಯಕ್ಕೆ ವಾಲಿಡಿಟಿ ಇದೆ, ಅದು ಒಂದಿಷ್ಟು ದಿನಗಳ ನಂತರ ಬಾಡುತ್ತದೆ. ಆದರೆ ಪ್ರತಿಭೆ ಹಾಗಲ್ಲ. ಪ್ರತಿಭೆ ಮತ್ತು ಬುದ್ಧಿವಂತಿಕೆಗೆ ವಾಲಿಡಿಟಿ ಇಲ್ಲ, ಇದು ವಯಸ್ಸಾದಂತೆ ಪ್ರಬುದ್ಧತೆ ಸಾಧಿಸುತ್ತದೆ.

40 ವರ್ಷದ ವರ್ಷದ ನಂತರ, ಮನುಷ್ಯನ ಮುಖದಲ್ಲಿ ಸುಕ್ಕು ಮೂಡಲು ಆರಂಭಿಸುತ್ತದೆ. ಇದನ್ನು ತಡೆಯುವುದು ಅಸಾಧ್ಯ, ಕೆಲವರಿಗೆ ಒಂದೆರಡು ವರ್ಷ ತಡವ...