ಭಾರತ, ಫೆಬ್ರವರಿ 4 -- Bengaluru Crime: ಪ್ರಸಿದ್ಧ ನಟಿಗೆ ಐಷಾರಾಮಿ ಮನೆ ಗಿಫ್ಟ್‌ ಕೊಟ್ಟಿದ್ದ ಖತರ್‌ನಾಕ್ ಕಳ್ಳನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಸಿನಿಮೀಯ ಬದುಕು ಬೆನ್ನು ಹತ್ತಿದ ಖದೀಮ, ಕಳ್ಳತನ ನಡೆಸುತ್ತ ಶೋಕಿ ಮಾಡ್ತಾ ಬದುಕು ಸಾಗಿಸುತ್ತಿದ್ದ. ಮಡಿವಾಳ ಪೊಲೀಸರ ಕಾರ್ಯಾಚರಣೆಯಲ್ಲಿ ಈ ಶೋಕಿಲಾಲಾ ಕಳ್ಳ ಬಲೆಗೆ ಬಿದ್ದಿದ್ದು, ಆತನಿಂದ 12 ಲಕ್ಷಕ್ಕೂ ಹೆಚ್ಚು ಮೌಲ್ಯದ ಕಳ್ಳತನದ ಮಾಲನ್ನು ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನನ್ನು ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಪಂಚಾಕ್ಷರಿ ಸ್ವಾಮಿ (37) ಎಂದು ಗುರುತಿಸಲಾಗಿದೆ.

ಕುಖ್ಯಾತ ಅಂತಾರಾಜ್ಯ ಕಳ್ಳನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಕಳ್ಳನನ್ನು ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಪಂಚಾಕ್ಷರಿ ಸ್ವಾಮಿ ಎಂದು ಗುರುತಿಸಲಾಗಿದೆ. ತೆಲಂಗಾಣ, ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕ ಸೇರಿ ವಿವಿಧೆಡೆ ಈತನ ವಿರುದ್ಧ 150ಕ್ಕೂ ಹೆಚ್ಚು ಕಳವು ಪ್ರಕರಣಗಳಿವೆ. ಈತ ಜನವರಿ 9 ರಂದು ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗೆ ನುಗ್ಗಿ ಅಲ್...