ಭಾರತ, ಫೆಬ್ರವರಿ 14 -- ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ವಿದ್ಯಾರ್ಥಿ ಜೀವನದ ಬಹುಮುಖ್ಯ ಹಂತ. ಇದೇ ವೇಳೆ ಪಿಯುಸಿ ಕೂಡಾ ಹೀಗೆಯೇ. ಮುಂದಿನ ವಿದ್ಯಾಭ್ಯಾಸಕ್ಕೆ ಈ ಹಂತ ಪ್ರಮುಖ ಮಾನದಂಡ. ಸದ್ಯ SSLC ಹಾಗೂ PUC ವಿದ್ಯಾರ್ಥಿಗಳು ತಮ್ಮ ಅಂತಿಮ ಪರೀಕ್ಷೆ ಕುರಿತಾಗಿ ಹೆಚ್ಚು ಯೋಚಿಸುತ್ತಿರುವ ಸಮಯ. ಪೂರ್ವಸಿದ್ಧತಾ ಪರೀಕ್ಷೆಗಳನ್ನು ಬರೆಯುವುದರೊಂದಿಗೆ ನಿರಂತರ ಓದು, ಅಭ್ಯಾಸ, ರಿವಿಷನ್‌ ಸಾಮಾನ್ಯ. ಈ ನಡುವೆ ಪರೀಕ್ಷೆಯ ವಿಷಯವಾರು ಪ್ರಶ್ನೆ ಪತ್ರಿಕೆಗಳ ಮಾದರಿ ಗಮನಿಸಿ ಅದಕ್ಕೆ ತಕ್ಕನಾಗಿ ಉತ್ತರ ಬರೆಯಲು ಅಭ್ಯಾಸ ಮಾಡುವುದು ಉತ್ತಮ. ಇದು ಪರೀಕ್ಷಾ ಕೊಠಡಿಯಲ್ಲಿ ಸಮಯ ನಿರ್ವಹಣೆಗೆ ನೆರವಾಗುತ್ತದೆ.

ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸುವಾಗ, ಹಳೆಯ ಮಾದರಿ ಪ್ರಶ್ನೆ ಪತ್ರಿಕೆಗಳು ಅಥವಾ ನೀಲನಕ್ಷೆ ಇಟ್ಟುಕೊಳ್ಳುವುದು ಜಾಣತನ. ಆಯಾ ಪ್ರಶ್ನೆಗಳ ಅಂಕಗಳ ಆಧಾರದ ಮೇಲೆ ಉತ್ತರ ಬರೆಯಿರಿ. ಮೊದಲು ಒಂದು ಅಂಕಗಳ ಪ್ರಶ್ನೆ ಎಷ್ಟಿರುತ್ತವೆ, ಎರಡು ಅಂಕಗಳ ಪ್ರಶ್ನೆ ಎಷ್ಟಿರುತ್ತವೆ, ದೀರ್ಘ ಉತ್ತರ ಬರೆಯಬೇಕಾದ ಪ್ರಶ್ನೆಗಳು ಎಷ್ಟು. ಹ...