ಭಾರತ, ಮಾರ್ಚ್ 17 -- Manada Matu Column: ನಾವು ಪ್ರಶಂಸೆ ಮತ್ತು ವಿಮರ್ಶೆಗಳನ್ನು ಸಮನಾಗಿ ಸ್ವೀಕರಿಸಬಹುದೇ? ಅಂದರೆ ಎರಡನ್ನೂ ಎದುರಿಸುವ ಕಲೆಯನ್ನು ಕಲಿತರೆ ಹೇಗೆ? ಇನ್ನೊಬ್ಬರ ಪ್ರಶಂಸೆಯು ನಮಗೆ ಸಮಾಧಾನ, ಸಂತೋಷ ಕೊಡಬಲ್ಲದು. ಪ್ರಶಂಸೆಯಲ್ಲಿ ನಮ್ಮ ಹೆಮ್ಮೆ, ಆತ್ಮಗೌರವ ಅಡಗಿರುವಂತೆ ಭಾಸವಾಗುತ್ತದೆ ಮತ್ತು ಸ್ಫೂರ್ತಿಯೂ ಸಿಗುತ್ತದೆ. ನಮ್ಮ ಸಾಧನೆ, ಹೋರಾಟ ಮತ್ತು ಪ್ರಯತ್ನಗಳನ್ನು ಜನರು ಗುರುತಿಸಲಿ, ಪ್ರಶಂಸೆ ನೀಡಲಿ ಎಂದು ನಾವು ಬಯಸುತ್ತೇವೆ, ಬಯಸಿದ್ದು ದೊರೆತಾಗ ಸಾರ್ಥಕವಾಯಿತು ಎನ್ನಿಸುತ್ತದೆ. ಆದರೆ ಸಿಗಲಿಲ್ಲವಾದ್ದಲ್ಲಿ ವ್ಯರ್ಥವೆನ್ನಿಸಿ ನಮ್ಮಲ್ಲಿ ಬೇಸರ ಮೂಡಿಸುತ್ತದೆ. ಜನರ ವಿಮರ್ಶೆಗಳಿಂದ ನಾವು ಕುಗ್ಗಿ ಹೋಗುತ್ತೇವೆ. ಅವರು ಯಾಕೆ ಹಾಗೆ ಹೇಳಿದರು? ನನ್ನ ಬಗ್ಗೆ ಹಾಗೆ ಹೇಳಬಾರದಿತ್ತು, ಅವರು ಸರಿಯಿಲ್ಲ, ನನ್ನನ್ನು ದ್ವೇಶಿಸುತ್ತಾರೆ. ಹೀಗೆ ನೆಗೆಟಿವ್ ಮತ್ತು ಕೆರಳಿಸುವಂತಹ ಆಲೋಚನೆಗಳು ನಮ್ಮಲ್ಲಿ ಮನೆ ಮಾಡುತ್ತವೆ.

ವಿಮರ್ಶೆಗಳು ನಮಗೆ ನೋವುಂಟು ಮಾಡುತ್ತದೆಯೇ ಅಥವಾ ಸಹಾಯ ಮಾಡುತ್ತದೆಯೋ ಎನ್ನುವುದು ನಾವ...