ಭಾರತ, ಫೆಬ್ರವರಿ 14 -- ಪ್ರವಾಸ ಮಾಡೋದು ಹಲವರಿಗೆ ನೆಚ್ಚಿನ ಹವ್ಯಾಸ. ತಾವಿರುವ ದೇಶದ ಪ್ರವಾಸಿ ತಾಣಗಳು ಮಾತ್ರವಲ್ಲ, ಪ್ರಪಂಚದಾದ್ಯಂತ ಇರುವ ಪ್ರದೇಶಗಳನ್ನು ಕಾಣಬೇಕು ಎನ್ನುವ ಕನಸಿನೊಂದಿಗೆ ಪ್ರಯಾಣ ಮಾಡುತ್ತಲೇ ಇರುವವರು ಇದ್ದಾರೆ. ಸುದೀರ್ಘ ರಜೆ ಸಿಕ್ಕರೆ ಫಾರಿನ್ ಟ್ರಿಪ್ ಮಾಡುವ ಟ್ರೆಂಡ್ ಕೂಡ ಶುರುವಾಗಿದೆ. ಅಲ್ಲದೇ ವಿದೇಶ ಪ್ರವಾಸಕ್ಕೆ ಹೊಂದುವ ದೇಶಗಳಿಗಾಗಿ ಹುಡುಕಾಟ ನಡೆಸುತ್ತಿರುತ್ತಾರೆ.

ಇಂದು ನಾವು ನಿಮಗೆ ಹೇಳಲು ಹೊರಟಿರುವ ದೇಶದ ಬಗ್ಗೆ ಕೇಳಿದ್ರೆ ಖಂಡಿತ ನಿಮಗೆ ಖುಷಿ ಎನ್ನಿಸುತ್ತದೆ. ಇದು ವಿಶ್ವದ ಅತ್ಯಂತ ಸುಂದರ ದೇಶವಾಗಿದೆ. ಈ ದೇಶದಲ್ಲಿ ಇರುವುದು ಕೇವಲ ಒಂದೇ ಒಂದು ರಸ್ತೆ. ನೀವು ಇಡೀ ದೇಶವನ್ನು ಒಂದೇ ರಸ್ತೆಯಲ್ಲಿ ಪ್ರಯಾಣಿಸಬಹುದು. ಈ ದೇಶದ ಹೆಸರು ಟುವಾಲು. ಈ ದೇಶವು ಒಂಬತ್ತು ದ್ವೀಪಗಳಿಂದ ಕೂಡಿದೆ. ಇದರ ಜನಸಂಖ್ಯೆ ಕೇವಲ 11,000, ಇದು ಕಡಿಮೆ ಜನಸಂಖ್ಯೆ ಹೊಂದಿರುವ ಸ್ವತಂತ್ರ ರಾಷ್ಟ್ರಗಳಲ್ಲಿ ಒಂದಾಗಿದೆ. ಈ ದೇಶದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಟುವಾಲು ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲ...