ಭಾರತ, ಮಾರ್ಚ್ 28 -- ಕಳೆದ ಮೂರ್ನಾಲ್ಕು ವರ್ಷಗಳ ಕಾಲ ಕೊರೊನಾ ಸಾಂಕ್ರಾಮಿಕದ ಭೀತಿ ಇರುವ ಕಾರಣ ಹಲವರು ಪ್ರವಾಸ, ಪಿಕ್ನಿಕ್‌ಗಳಿಗೆ ತಾತ್ಕಾಲಿಕ ಬ್ರೇಕ್‌ ಹಾಕಿದ್ದರು. ಇದೀಗ ಪ್ರಪಂಚದಾದ್ಯಂತ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ್ದು, ತಮ್ಮ ಬಕೆಟ್‌ ಲಿಸ್ಟ್‌ನಲ್ಲಿರುವ ತಾಣಗಳಿಗೆ ಪ್ರವಾಸ ಹೊರಡಲು ಸಜ್ಜಾಗಿದ್ದಾರೆ. ಯಂಗ್‌ಸ್ಟರ್ಸ್‌ಗಳು ಮಾತ್ರವಲ್ಲ, ಮಕ್ಕಳಿರುವ ದಂಪತಿ ಕೂಡ ಪ್ರವಾಸ ಹೊರಡಲು ಸಜ್ಜಾಗಿದ್ದಾರೆ. ಅದಕ್ಕೆ ಕಾರಣ ಬೇಸಿಗೆ ರಜೆ.

ಆದರೆ ಮಕ್ಕಳಿರುವ ಪೋಷಕರು ಪ್ರವಾಸಕ್ಕೆ ಹೊರಡುವ ಮುನ್ನ ಸಾಕಷ್ಟು ಚಿಂತಿಸುತ್ತಾರೆ. ಯಾಕೆಂದರೆ ಪ್ರಯಾಣದ ವೇಳೆ ಮಕ್ಕಳು ಹೆಚ್ಚಾಗಿ ಹೊಟ್ಟೆಯ ಸಮಸ್ಯೆ ಅಂದರೆ ಹೊಟ್ಟೆ ನೋವು, ವಾಕರಿಕೆಯಂತಹ ಸಮಸ್ಯೆಗಳು ಎದುರಾಗಬಹುದು. ಇದರಿಂದ ಪ್ರವಾಸದ ವೇಳೆ ಮಕ್ಕಳೂ, ಪೋಷಕರು ಇಬ್ಬರೂ ತೊಂದರೆ ಅನುಭವಿಸುತ್ತಾರೆ. ಈ ಕಾರಣಕ್ಕೆ ಮಕ್ಕಳೊಂದಿಗೆ ಪ್ರವಾಸಕ್ಕೆ ಹೋಗಲು ಪೋಷಕರು ಸಾಕಷ್ಟು ಯೋಚಿಸುತ್ತಾರೆ.

ಪ್ರವಾಸ ಎಂದರೆ ಮಕ್ಕಳು ಖುಷಿಯಿಂದ ಹೊರಡುವುದು ಸಹಜ. ಆದರೆ, ಅತಿಸಾರ, ಮಲಬದ್ಧತೆ, ವಾಂತಿ ಮತ್ತು...