Bengaluru, ಫೆಬ್ರವರಿ 3 -- Kannappa Movie: ಟಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಕಣ್ಣಪ್ಪ ಸಿನಿಮಾ ಒಂದಿಲ್ಲ ಒಂದು ಕಾರಣಕ್ಕೆ ಕಳೆದೊಂದು ವರ್ಷದಿಂದ ಸುದ್ದಿಯಲ್ಲಿದೆ. ಮೇಕಿಂಗ್‌, ಬಜೆಟ್‌, ತಾರಾಗಣದ ವಿಚಾರವಾಗಿ ಸಿನಿಮಾ ಸದ್ದು ಮಾಡುತ್ತಿದೆ. ಇದೀಗ ಇದೇ ಸಿನಿಮಾದಿಂದ ಬಿಗ್‌ ಸರ್ಪ್ರೈಸ್‌ವೊಂದು ಹೊರಬಿದ್ದಿದೆ. ಈ ವರೆಗೂ ಈ ಚಿತ್ರದಲ್ಲಿ ಪ್ರಭಾಸ್‌ ನಟಿಸುತ್ತಿದ್ದಾರೆ ಎಂಬುದಷ್ಟೇ ಗೊತ್ತಿತ್ತು. ಆದರೆ, ಎಲ್ಲಿಯೂ ಅವರ ಫಸ್ಟ್‌ ಲುಕ್‌ ಹೊರಬಿದ್ದಿರಲಿಲ್ಲ. ಇದೀಗ ಇಂದು (ಫೆ. 3) ಇದೇ ಚಿತ್ರದ ರುದ್ರ ಪಾತ್ರಧಾರಿ ಪ್ರಭಾಸ್‌ ಅವರ ಫಸ್ಟ್‌ ಲುಕ್‌ ರಿವೀಲ್‌ ಆಗಿದೆ.

ಕಣ್ಣಪ್ಪ ಸಿನಿಮಾ ಸದ್ಯ ಸೌತ್‌ ಮಾತ್ರವಲ್ಲದೆ, ಬಾಲಿವುಡ್‌ನಲ್ಲಿಯೂ ಕುತೂಹಲ ಮೂಡಿಸಿದೆ. ಅದಕ್ಕೆ ಕಾರಣ; ಈ ಸಿನಿಮಾ ಮೂಲಕ ಅಕ್ಷಯ್‌ ಕುಮಾರ್‌ ದಕ್ಷಿಣದತ್ತ ಮುಖ ಮಾಡಿದ್ದಾರೆ. ಶಿವನಾಗಿ ಅವರ ಪಾತ್ರ ಈ ಸಿನಿಮಾದಲ್ಲಿ ಇರಲಿದೆ. ಇವರ ಜತೆಗೆ ಬೇರೆ ಬೇರೆ ಇಂಡಸ್ಟ್ರಿಯ ಘಟಾನುಘಟಿ ಕಲಾವಿದರೂ ಈ ಮಹಾಕಥೆಯ ಭಾಗವಾಗಿದ್ದಾರೆ. ಮೇಕಿಂಗ್‌ ಮೂಲಕವೇ ನೋಡುಗರ ಕಣ್ಣರಳಿಸ...