Bengaluru, ಜುಲೈ 31 -- ಬೆಂಗಳೂರು: ಪ್ರಯೋಗ ಶಿಕ್ಷಣ ಸಂಶೋಧನಾ ಸಂಸ್ಥೆ, ಹವಾಮಾನ ಶಿಕ್ಷಣದ ಮರುಚಿಂತನೆಗೆ ಮತ್ತು ಮುಂದಿನ ಪೀಳಿಗೆಯ ಭೂವಿಜ್ಞಾನ ನಾಯಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ತನ್ನ ಸಂಶೋಧನಾ ಕ್ಯಾಂಪಸ್‌ನಲ್ಲಿ ಅಂತರರಾಷ್ಟ್ರೀಯ ಭೂವಿಜ್ಞಾನ ಯುವ ಚಳುವಳಿ(ಐಜಿವೈಎಂ) ಕಾರ್ಯಾಗಾರದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿತ್ತು.

ಭಾರತ ಸರ್ಕಾರದ ಭೂವಿಜ್ಞಾನ ಸಚಿವಾಲಯ ಮತ್ತು ರೈಸ್‌ ಫಿಲಾಂಥ್ರೋಪಿ (RISE Philanthropy) ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಭೂವಿಜ್ಞಾನ ಶಿಕ್ಷಣ ಸಂಸ್ಥೆಯ(IGEO) ಮಾರ್ಗದರ್ಶನದಲ್ಲಿ ಆಯೋಜಿಸಲಾದ 'ಐಜಿವೈಎಂ2025ʼ ಕಾರ್ಯಾಗಾರವು ಇಸ್ರೇಲ್, ಫ್ರಾನ್ಸ್, ಸ್ಪೇನ್, ಶ್ರೀಲಂಕಾ ಮತ್ತು ಯುಎಸ್‌ಎ ನಂತಹ ದೇಶಗಳನ್ನು ಪ್ರತಿನಿಧಿಸುವ ಅಂತರರಾಷ್ಟ್ರೀಯ ಭೂವಿಜ್ಞಾನ ಒಲಿಂಪಿಯಾಡ್(ಐಇಎಸ್‌ಒ)ನ 15 ಅಂತರರಾಷ್ಟ್ರೀಯ ಅಂತಿಮ ಸ್ಪರ್ಧಿಗಳು ಮತ್ತು ಭೂವಿಜ್ಞಾನದ ಕುರಿತಾದ ತಮ್ಮ ಉತ್ಸಾಹವನ್ನು ಹಂಚಿಕೊಳ್ಳಲಿರುವ 15 ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 30 ...