Bengaluru, ಮೇ 28 -- ಬೆಂಗಳೂರು: ಸಾರ್ವಜನಿಕರು ಮತ್ತು ಪ್ರಯಾಣಿಕರ ಆಕ್ರೋಶಕ್ಕೆ ಮಣಿದ ಬೆಂಗಳೂರು ಮೆಟ್ರೋ ರೈಲ್‌ ಕಾರ್ಪೋರೇಷನ್‌ ಲಿ (ಬಿಎಂಆರ್‌ಸಿಎಲ್‌) ಮೆಟ್ರೋ ನಿಲ್ದಾಣಗಳಲ್ಲಿರುವ ಸಾರ್ವಜನಿಕ ಶೌಚಾಲಯಗಳ ಬಳಕೆಗೆ ವಿಧಿಸಿದ್ದ ಶುಲ್ಕವವನ್ನು ರದ್ದುಗೊಳಿಸಿದೆ. ನಗರದ 12 ಮೆಟ್ರೋ ನಿಲ್ದಾಣಗಳಲ್ಲಿರುವ ಶೌಚಾಲಯಗಳ ಬಳಕೆಗೆ ಶುಲ್ಕ ವಿಧಿಸಿತ್ತು. ಇದಕ್ಕಾಗಿ ಲಾಭ ರಹಿತ ಸಂಘಟನೆಯಾದ ಸುಲಭ್‌ ಇಂಟರ್‌ನ್ಯಾಶನಲ್ ಜತೆ ಒಪ್ಪಂದ ಮಾಡಿಕೊಂಡಿತ್ತು. ಇದೀಗ ಒಪ್ಪಂದವನ್ನು ರದ್ದುಗೊಳಿಸಿದೆ.

ಟಿಕೆಟ್‌ ವಲಯಗಳಿಂದ ಹೊರಗೆ ಇರುವ ಶೌಚಾಲಯಗಳ ನಿರ್ವಹಣೆಯನ್ನು ಸುಲಭ್‌ ಶೌಚಾಲಯ ಇಂಟರ್‌ನ್ಯಾಶನಲ್‌ಗೆ ವಹಿಸಿತ್ತು. ಒಪ್ಪಂದದ ಪ್ರಕಾರ ಮೂತ್ರ ವಿಸರ್ಜನೆಗೆ 2 ರೂ. ಮತ್ತು ಶೌಚಾಲಯ ಬಳಕೆಗೆ ರೂ. 5 ನಿಗದಿಪಡಿಸಲಾಗಿತ್ತು. ನಮ್ಮ ಮೆಟ್ರೋದ ಈ ನಿರ್ಧಾರಕ್ಕೆ ಪ್ರತಿದಿನ ಮೆಟ್ರೋ ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರು ಮತ್ತು ಸಾರ್ವಜನಿಕರು ಶುಲ್ಕ ನಿಗದಿಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಈಗಾಗಲೇ ಶೇ. 71 ರಷ್ಟು ಪ್ರಯಣ ದರ ಹೆಚ್ಚಿಸಲಾಗಿದ್ದು, ಶೌ...