ಭಾರತ, ಫೆಬ್ರವರಿ 11 -- ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಮಹಾ ಕುಂಭಮೇಳದ ಕೇಂದ್ರ ಬಿಂದುವಾಗಿದೆ. ಪವಿತ್ರ ಸ್ನಾನಕ್ಕಾಗಿ ಇಲ್ಲಿಗೆ ಕೋಟ್ಯಂತರ ಮಂದಿ ಭೇಟಿ ನೀಡುತ್ತಿದ್ದಾರೆ. ಪ್ರಯಾಗ್‌ರಾಜ್ ಕೋಟೆ ಆವರಣದ ಬಳಿ ಇರುವ ಬಡೇ ಹುನುಮಾನ್ ಮಂದಿರ ಹಾಗೂ ಅಲ್ಲಿನ ಸ್ಥಳೀಯ ಆರ್ಥಿಕ ಮೂಲದ ಬಗ್ಗೆ ಪತ್ರಕರ್ತರಾದ ಹರ್ಷವರ್ಧನ ಶೀಲವಂತ ಅವರ ಫೇಸ್ ಬುಕ್ ಬರಹವನ್ನು ಇಲ್ಲಿ ಯಥಾವತ್ತಾಗಿ ನೀಡಲಾಗಿದೆ.

ಪ್ರಯಾಗ್‌ರಾಜ್ ಕೋಟೆ ಆವರಣದ, ಬಲ ಬದಿಗೆ ಬಡೇ ಹನುಮಾನ್ ಮಂದಿರವಿದೆ. ಕೋಟೆ ಪ್ರವೇಶ ದ್ವಾರದ ಬಳಿ, ಎಡ ಬದಿಗೆ ಸಹಸ್ರ ವರ್ಷಗಳ, ಎಂದಿಗೂ ಬಾಡದ ವಟ ವೃಕ್ಷವೂ ಇದೆ. ತ್ರಿವೇಣಿ ಸಂಗಮದ ಬಳಿಯೇ ಇರುವುದರಿಂದ, ಎಲ್ಲರೂ ದರ್ಶನ ಆಕಾಂಕ್ಷಿಗಳೇ. ಹೀಗಾಗಿ, ಇಲ್ಲಿಯೂ ಸದೈವ ಜನ ಜಂಗುಳಿ, ದಿನದ 24 ತಾಸೂ ಸಾಮಾನ್ಯ!

ಬಡೇ ಹನುಮಾನ್ ಮಂದಿರದ ಪಕ್ಕದಲ್ಲಿ, ಹನುಮಂತನ ಶಿರೋ ಭಾಗದಲ್ಲಿ, ದೊಡ್ಡ ಅರಳಿ ಮರವಿದೆ. ಬುಡದಲ್ಲಿ ಶ್ರೀ ಶನಿ ದೇವ. ದೀಪ ಹಚ್ಚಿ, ಬೆಳಗಿ, ಮರದ ಬೃಹತ್ ಕಟ್ಟೆಯ ಮೇಲೆ ಇಟ್ಟು, ನಮಸ್ಕರಿಸುವುದು ರೂಢಿಯಲ್ಲಿದೆ. ವಿಶೇಷವಾಗಿ ಹೆಣ್ಣು ಮಕ್...